ಅನುಭವಿ ವಿನೇಶ್, ಅನ್ಯುಗೆ ಮೊದಲ ಚಿನ್ನ

Update: 2021-04-16 18:30 GMT

 ಅಲ್ಮಾಟಿ: ಭಾರತದ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಅನ್ಶು ಮಲಿಕ್ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನೊಂದಿಗೆ ಚಿನ್ನ ಜಯಿಸಿದ್ದಾರೆ.

ಚೀನ ಮತ್ತು ಜಪಾನಿನ ಪ್ರತಿಸ್ಪರ್ಧಿಗಳ ಅನುಪಸ್ಥಿತಿಯಲ್ಲಿ ವಿನೇಶ್ ಅವರು 53 ಕೆ.ಜಿ. ವಿಭಾಗದಲ್ಲಿ ಒಂದು ಪಾಯಿಂಟ್ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದರು.

   ಕೆಲವು ದಿನಗಳ ಹಿಂದೆ ಟೋಕಿಯೊ ಗೇಮ್ಸ್ ಕೋಟಾವನ್ನು ಪಡೆದ 19ರ ಹರೆಯದ ಅನ್ಶು 57 ಕೆ.ಜಿ.ವಿಭಾಗದಲ್ಲಿ ಮತ್ತೊಂದು ಆತ್ಮವಿಶ್ವಾಸದ ಪ್ರದರ್ಶನದೊಂದಿಗೆ ಸೀನಿಯರ್ ವಿಭಾಗದಲ್ಲಿ ತನ್ನ ಪ್ರಗತಿ ಸಾಧಿಸಿದರು. ಅವರು ಫೈನಲ್‌ನಲ್ಲಿ 3-0 ಸೆಟ್‌ಗಳಿಂದ ಜಯ ಗಳಿಸಿದರು. ವಿನೇಶ್ ಮಂಗೋಲಿಯಾದ ಒಟ್ಗೊಂಜಾರ್ಗಲ್ ಗನ್‌ಬತಾರ್ ಮತ್ತು ತೈಪೆಯ ಮೆಂಗ್ ಹ್ಸುವಾನ್ ಹ್ಸೀಹ್ ವಿರುದ್ಧ ಜಯ ಗಳಿಸಿದರು. ಗಾಯಗೊಂಡ ಕೊರಿಯಾದ ಹ್ಯುನ್ಯೌಂಗ್ ಓಹ್ ಸೆಮಿಫೈನಲ್‌ಗೆ ಹೋಗಲಿಲ್ಲ. ಕಳೆದ ವರ್ಷ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನ ದಿಲ್ಲಿ ಆವೃತ್ತಿಯಲ್ಲಿ ಕಂಚು ಗೆದ್ದಿದ್ದ ವಿನೇಶ್ ಅವರು ಫೈನಲ್‌ನಲ್ಲಿ 6-0 ಮುನ್ನಡೆ ಸಾಧಿಸಿದರು ಮತ್ತು ಮೊದಲ ಅವಧಿಯಲ್ಲಿಯೇ ತಮ್ಮ ಪ್ರತಿಸ್ಪರ್ಧಿಯನ್ನು ಮಣಿಸುವ ಮೂಲಕ ಸ್ಪರ್ಧೆಯನ್ನು ಮುಗಿಸಿದರು.

 ಅನ್ಶು ತನ್ನ ಮೊದಲ ಎರಡು ಸ್ಪರ್ಧೆಗಳಲ್ಲಿ ಝೆಬೆಕಿಸ್ತಾನದ ಸೆವಾರಾ ಎಶ್ಮುರಾಟೊವಾ ಮತ್ತು ಕಿರ್ಗಿಸ್ತಾನ್‌ನ ನಝೀರಾ ಮಾರ್ಸ್‌ಬೆಕ್ ಕೈಝಿ ವಿರುದ್ಧ ತಾಂತ್ರಿಕ ಶ್ರೇಷ್ಠತೆಯಿಂದ ಸೆಮಿಫೈನಲ್ ತಲುಪಿದರು.

ಪಿಇಟಿ 62 ಕೆ.ಜಿ. ವಿಭಾಗದಲ್ಲಿ ತನ್ನ ಹಕ್ಕನ್ನು ತಪ್ಪಿಸಿಕೊಂಡ ಸಾಕ್ಷಿ ಮಲಿಕ್ 65 ಕಿ.ಗ್ರಾಂ ಸ್ಪರ್ಧೆಯಲ್ಲಿ ಫೈನಲ್ ತಲುಪಿದರು.

  ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ತಮ್ಮ ಮೊದಲ ಎರಡು ಪಂದ್ಯಗಳನ್ನು ತಾಂತ್ರಿಕ ಶ್ರೇಷ್ಠತೆಯಿಂದ ಗೆದ್ದರು. ಹ್ಯಾನ್‌ಬಿಟ್ ಲೀ ವಿರುದ್ಧ ಸಾಕ್ಷಿ 3-0 ಮುನ್ನಡೆ ಸಾಧಿಸಿದರು.ಸಾಕ್ಷಿ ಮಲಿಕ್ ಮಂಗೋಲಿಯಾದ ಬೊಲೋರ್ಟುಂಗಲಾಗ್ ಜೊರಿಗ್ಟ್ ವಿರುದ್ಧ ಚಿನ್ನಕ್ಕಾಗಿ ಹೋರಾಡಲಿದ್ದಾರೆ.

72 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿ ರುವ ದಿವ್ಯಾ ಕಕ್ರನ್ ಕೂಡ ಉತ್ತಮ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News