ಕುಂಭಮೇಳದಿಂದ ವಾಪಸಾಗುವ ಯಾತ್ರಿಕರು ಕೊರೋನವನ್ನು ಪ್ರಸಾದದಂತೆ ವಿತರಿಸಲಿದ್ದಾರೆ

Update: 2021-04-17 09:31 GMT

ಮುಂಬೈ: ಉತ್ತರಾಖಂಡದ ಹರಿದ್ವಾರದ ಕುಂಭಮೇಳದಿಂದ ವಾಪಸಾಗುವ ಯಾತ್ರಾರ್ಥಿಗಳು ತಮ್ಮ ರಾಜ್ಯಗಳಲ್ಲಿ ಕೊರೋನ ವೈರಸ್ ಅನ್ನು ಪ್ರಸಾದ ರೀತಿ ವಿತರಿಸಲಿದ್ದಾರೆ ಎಂದು ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಇಂದು ಹೇಳಿದ್ದಾರೆ.

ಕುಂಭ ಮೇಳದಿಂದ ಆಯಾ ರಾಜ್ಯಗಳಿಗೆ ವಾಪಸಾಗುವವರು ಕೊರೋನ ವನ್ನು ಪ್ರಸಾದದ ರೂಪದಲ್ಲಿ ವಿತರಿಸುತ್ತಾರೆ. ಈ ಎಲ್ಲ ಜನರನ್ನು ಆಯಾ ರಾಜ್ಯಗಳಲ್ಲಿ ತಮ್ಮ ಸ್ವಂತವೆಚ್ಚದಲ್ಲಿ ಕ್ವಾರಂಟೈನ್ ನಲ್ಲಿಡಬೇಕು. ಮುಂಬೈನಲ್ಲಿಯೂ ಸಹ ಅವರನ್ನು ಕ್ವಾರಂಟೈನ್ ನಲ್ಲಿಡುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಕಿಶೋರಿ ಪಡ್ನೆಕರ್ ಹೇಳಿದ್ದಾಗಿ ಎಎನ್ ಐ ವರದಿ ಮಾಡಿದೆ.

ಸಾವಿರಾರು ಭಕ್ತರು ಕುಂಭಮೇಳದಲ್ಲಿ ಭಾಗವಹಿಸಲು ಗಂಗಾ ನದಿಯ ದಡದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದು ಕೋವಿಡ್ ಸೋಂಕು ಮತ್ತಷ್ಟು ಹರಡುವ ಭೀತಿಯನ್ನು ಹುಟ್ಟುಹಾಕಿತ್ತು.

ಮುಂಬೈನ ಶೇ.95ರಷ್ಟು ಜನರು ಕೋವಿಡ್-19 ನಿರ್ಬಂಧಗಳನ್ನು ಗೌರವಿಸುತ್ತಿದ್ದಾರೆ. ಉಳಿದ ಶೇ.5ರಷ್ಟು ಮಂದಿ ನಿಯಮ ಪಾಲಿಸುತ್ತಿಲ್ಲ. ಈಗಿನ ಕೋವಿಡ್-19 ಪರಿಸ್ಥಿತಿಯನ್ನು ನೋಡಿದರೆ ಸಂಪೂರ್ಣ ಲಾಕ್ ಡೌನ್ ವಿಧಿಸಬೇಕಾಗಬಹುದು ಎಂದು ಮೇಯರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News