​ಮಂಗಳೂರು ವಿಭಾಗ: ಕರ್ತವ್ಯಕ್ಕೆ ಕೆಎಸ್ಸಾರ್ಟಿಸಿ ನೌಕರರ ಹಾಜರು

Update: 2021-04-17 17:19 GMT

ಮಂಗಳೂರು,ಎ.17: ಆರನೇ ವೇತನ ಆಯೋಗದ ಶಿಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದ ಬಿಸಿ ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಣ್ಣಗಾಗುತ್ತಿದೆ. ಶನಿವಾರ ಸುಮಾರು 390ಕ್ಕೂ ಅಧಿಕ ಬಸ್‌ಗಳು ಮಂಗಳೂರಿನ ಎರಡು ಡಿಪೋಗಳಿಂದ ನಾನಾ ರೂಟ್‌ಗಳಿಗೆ ಸಂಚರಿಸಿವೆ. ಅದಲ್ಲದೆ ಸಾವಿರಕ್ಕೂ ಅಧಿಕ ಸಿಬ್ಬಂದಿ ವರ್ಗವು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ರವಿವಾರ ಮತ್ತಷ್ಟು ಬಸ್‌ಗಳು ಸಂಚಾರ ಆರಂಭಿಸಲಿದ್ದು, ಸಿಬ್ಬಂದಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಸಾರಿಗೆ, ರಾಜಹಂಸ, ನಾನ್ ಎಸಿ ಸ್ಲೀಪರ್, ವೋಲ್ವೊ, ವೋಲ್ವೊ ಮಲ್ಟಿ ಆಕ್ಸೆಲ್, ಡ್ರೀಮ್ ಕ್ಲಾಸ್ ಸಹಿತ ವಿವಿಧ ಮಾದರಿಯ ಬಸ್‌ಗಳು ಕಾರ್ಯಾಚರಿಸಿದೆ. ನರ್ಮ್ ಬಸ್ ಸಂಚಾರ ಕೂಡ ಸೀಮಿತ ಸಂಖ್ಯೆಯಲ್ಲಿತ್ತು. ಈ ನಡುವೆ ಖಾಸಗಿ ಬಸ್‌ಗಳು ಕೂಡ ನಾನಾ ರೂಟ್‌ಗಳಲ್ಲಿ ಎಂದಿನಂತೆ ಸಂಚಾರ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News