ಕ್ರೈಸ್ಟ್ ಕಿಂಗ್: ಶಿಕ್ಷಕರಿಗೆ ಕೌಶಲ್ಯ ವರ್ಧನಾ ತರಬೇತಿ ಕಾರ್ಯಕ್ರಮ

Update: 2021-04-17 17:59 GMT

ಕಾರ್ಕಳ: “ಶಿಕ್ಷಣ ಸಂಸ್ಥೆ ಎಂಬುದು ಪಾಠ ಮಾಡುವ ಜಾಗವಲ್ಲ, ಬದಲಾಗಿ ಅದು ಕಲಿಕೆಯ ಕೇಂದ್ರ. ಇಲ್ಲಿ ಪ್ರತಿಯೊಬ್ಬ ಶಿಕ್ಷಕನೂ ಕೂಡಾ ವಿದ್ಯಾರ್ಥಿಯೇ ಆಗಿರುತ್ತಾನೆ. ಶಿಕ್ಷಕ ಆಧುನಿಕ ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಹೊಸ ಹೊಸ ಧನಾತ್ಮಕ ಬದಲಾವಣೆಗಳಿಗೆ ಒಗ್ಗಿಸಿಕೊಂಡು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಶಿಕ್ಷಕ ವೃತ್ತಿ ಎಂಬುದು ಒಂದು ದೀಕ್ಷೆ. ಅದನ್ನು ನಿಷ್ಟೆ, ಪ್ರಾಮಾಣಿಕತೆ ಹಾಗೂ ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಬೇಕು. ಶಿಕ್ಷಕರಾಗಿರುವುದು ನಮಗೆ ಸಿಕ್ಕಿರುವ ವರ” ಎಂದು ಕ್ರೈಸ್ಟ್‍ಕಿಂಗ್ ಎಜುಕೇಷನ್ ಟ್ರಸ್ಟ್‍ನ ಸದಸ್ಯ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಹೇಳಿದರು.

ಅವರು  ಕ್ರೈಸ್ಟ್‍ಕಿಂಗ್ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಮಕ್ಕಳ ಮಕ್ಕಳ ಮನೋವಿಜ್ಞಾನ ಹಾಗೂ ತರಗತಿ ನಿರ್ವಹಣೆ ಕುರಿತಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕೌಶಲ್ಯ ವರ್ಧನಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಂಗಳೂರಿನ ಸೈಂಟ್ ಅ್ಯನ್ಸ್ ಬಿ.ಎಡ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶರ್ಮಿಳಾ ಪುರ್ತಾದೋ ಅವರು ಸಂಪನ್ಮೂಲ ವ್ಯಕ್ತ್ತಿಗಳಾಗಿ ಆಗಮಿಸಿದ್ದರು.

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗುವುದರ ಮೂಲಕ ಅವರು ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಬೆಳಗ್ಗಿನಿಂದ ಸಂಜೆಯ ತನಕ ಸಂಸ್ಥೆಯ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ತರಗತಿ ನಿರ್ವಹಣೆ ಕುರಿತಂತೆ ವಿವಿಧ ಚಟುವಟಿಕೆಗಳ ಮೂಲಕ ತರಬೇತಿ ನೀಡಿದರು. ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಡಾ.ನಾರಾಯಣ ಶೇಡಿಕಜೆ, ಪ್ರೌಢಶಾಲಾ ವಿಭಾಗದ ಪ್ರಾಚಾರ್ಯ ಡೊಮಿನಿಕ್ ಅಂದ್ರಾದೆ ಹಾಗೂ ಪ್ರಾಥಮಿಕ ವಿಭಾಗದ ಪ್ರಾಚಾರ್ಯ ಮೇರಿಯನ್ ಡಿ’ಸೋಜ, ಆಡಳಿತ ಮಂಡಳಿಯ ಸದಸ್ಯ ಕೆವಿನ್ ಡಿ’ಮೆಲ್ಲೊ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ಪ್ರತೀಕ್ಷಾ ಪ್ರಭು ಸ್ವಾಗತಿಸಿ ಶ್ರೀಮತಿ ಜಯಲಕ್ಷ್ಮೀ ವಂದಿಸಿದರು. ಶ್ರೀಮತಿ ಲವೀನಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News