ಉಡುಪಿ ಜಿಲ್ಲಾಧಿಕಾರಿಯ ನಾಮಫಲಕದಲ್ಲಿ ತುಳು ಲಿಪಿ!

Update: 2021-04-18 11:23 GMT

ಉಡುಪಿ, ಎ.18: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ವಿವಿಧ ತುಳು ಸಂಘಟನೆಗಳು ಶನಿವಾರ ಕನ್ನಡದೊಂದಿಗೆ ತುಳು ಲಿಪಿ ಇರುವ ನಾಮ ಫಲಕವನ್ನು ನೀಡಿದ್ದು, ಜಿಲ್ಲಾಧಿಕಾರಿ, ತನ್ನ ಕಚೇರಿಯ ಟೇಬಲ್‌ನಲ್ಲಿ ಅದೇ ನಾಮಫಲಕವನ್ನು ಬಳಸಿಕೊಳ್ಳುವ ಮೂಲಕ ತುಳು ಪ್ರೇಮ ಮೆರೆದಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಆಕಾಶರಾಜ್ ಜೈನ್ ಇವರು ಜಿಲ್ಲಾಧಿಕಾರಿಗೆ ತುಳುಲಿಪಿ ಹೊಂದಿರುವ ನಾಮಫಲಕವನ್ನು ನೀಡಿ, ತುಳು ಭಾಷೆ ಮತ್ತು ತುಳು ಲಿಪಿಯ ಬಗ್ಗೆ ತಿಳುವಳಿಕೆ ಮೂಡಿಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಪ್ರಾದೇಶಿಕ ಭಾಷೆಗಳ ಬೆಳವಣಿಗೆಯು ಈ ಮಣ್ಣಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸಲು ಪೂರಕವಾಗ ಬಲ್ಲದು. ಪಂಚದ್ರಾವಿಡ ಭಾಷೆಗಳಲ್ಲೇ ಅತ್ಯಂತ ಶ್ರೇಷ್ಠಭಾಷೆಯೆಂದು ಪರಿಗಣಿ ಸಲ್ಪಟ್ಟಿರುವ ತುಳು ಭಾಷೆಯ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗು ವುದು ಎಂದರು.

ಉಡುಪಿ ಜಿಲ್ಲೆಯಲ್ಲಿ ಕನ್ನಡ ನಾಮಫಲಕದ ಜೊತೆಗೆ ತುಳುಲಿಪಿಯ ನಾಮಫಲಕ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ ತುಳುವರಿಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಅಕಾಡೆಮಿಯ ಸದಸ್ಯೆ ತಾರಾ ಉಮೇಶ್ ಆಚಾರ್ಯ ಮನವಿ ಮಾಡಿದರು.

ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಬೇಕು ಮತ್ತು ಉಡುಪಿ ಜಿಲ್ಲೆಯಲ್ಲಿ ತುಳುಭಾಷೆಗೆ ಮಾನ್ಯತೆ ಕೊಡಬೇಕು ಎಂದು ಜೈ ತುಳುನಾಡ್ ಸಂಘಟನೆಯ ಪರವಾಗಿ ತುಳು ಲಿಪಿ ಶಿಕ್ಷಕಿಯಾದ ಅಕ್ಷತಾ ಕುಲಾಲ್ ಮತ್ತು ಉಡುಪಿ ತುಳುಕೂಟ ಪರವಾಗಿ ತುಳುಕೂಟ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಸ್ಥಾಪಕ ಸದಸ್ಯ ಯು.ಜಿ.ದೇವಾಡಿಗ ಮನವಿಯನ್ನು ಡಿಸಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜೈ ತುಳುನಾಡ್ ಸಂಘಟನೆಯ ತುಳುಲಿಪಿ ಮೇಲ್ವಿ ಚಾರಕ ಶರತ್ ಕೊಡವೂರು, ತುಳು ಲಿಪಿ ಶಿಕ್ಷಕರಾದ ಕಿನ್ನು ಭಂಡಾರಿ ಮತ್ತು ಸ್ವಾತಿ ಸುವರ್ಣ, ಕೊಡವೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News