ರಾಜಕೀಯ ಲಾಭಕ್ಕಾಗಿ ಕೊಮುಭಾವನೆ ಕೆರಳಿಸುತ್ತಿರುವ ಬಿಜೆಪಿ: ಪಿಎಫ್‌ಐ

Update: 2021-04-18 12:03 GMT

ಉಡುಪಿ, ಎ.19: ಸಮರ್ಪಕ ದಾಖಲೆಗಳಿರುವ ಕೊಡವೂರಿನ ಪ್ರಾಚೀನ ಮಸೀದಿಯನ್ನು ಅಕ್ರಮ ಕಟ್ಟಡವೆಂದು ಸಮುದಾಯದ ನಡುವೆ ಹುಳಿಹಿಂಡಿ ಕೊಮುಸೌಹರ್ದತೆಯನ್ನು ಕದಡುವ ಮತ್ತು ರಾಜಕೀಯ ಲಾಭ ಪಡೆಯುವ ಕೆಲಸಕ್ಕೆ ಬಿಜೆಪಿ-ಸಂಘಪರಿವಾರ ಮುಂದಾಗಿರುವುದು ಖಂಡನೀಯ ಎಂದು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಆಹ್ಮದ್ ತಿಳಿಸಿದ್ದಾರೆ.

ಕೊಡವೂರಿನ ಕಲ್ಮಾತ್ ಮಸೀದಿ ಬಹಳ ಪ್ರಾಚೀನ ಮಸೀದಿಯಾಗಿದ್ದು, 1993ರಲ್ಲಿ ಮಸೀದಿಯ 67 ಸೆಂಟ್ಸ್ ಜಾಗವನ್ನು ವಕ್ಫ್ ಅಧೀನ ಪಡೆದು ನೋಂದಾಣಿ ಕೂಡ ಮಾಡಲಾಗಿದೆ. ಮಾರ್ಚ್ 2020 ಗಜೇಟ್ ನೋಟಿಫಿಕೇಶನ್ ಕೂಡ ಆಗಿದ್ದು, ಜನವರಿಯಲ್ಲಿ ಈ ಮಸೀದಿಗೆ ಆರ್‌ಟಿಸಿ ದೊರೆತಿದೆ. ಈ ಮಸೀದಿಯ ಸ್ಥಳ ವಕ್ಫ್ ಆಸ್ತಿಯೆಂದು ತಿಳಿದಿದ್ದರು, ದಾಖಲೆಗಳಿದ್ದರು ಅಲ್ಲಿನ ಬಿಜೆಪಿ-ಸಂಘಪರಿವಾರದ ನಾಯಕರು ಅಕ್ರಮವಾಗಿ ಮಸೀದಿಯ ಆವರಣ ಪ್ರವೇಶಿಸಿ ಸಿಸಿಟಿವಿ ಕ್ಯಾಮರಾ ತೆರವುಗೊಳಿಸಿದೆ. ಅಲ್ಲಿ ನೂರಾರು ಜನರನ್ನು ಸೇರಿಸಿ ಸಭೆ ಕರೆದು ಗ್ರಾಮಸ್ಥರನ್ನು ದಿಕ್ಕು ತಪ್ಪಿಸಿ ಕೊಮುಗಲಭೆ ಮಾಡುವ ಹುನ್ನಾರವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.

ಕೇವಲ ತಮ್ಮ ರಾಜೀಕಿಯ ಭವಿಷ್ಯಕ್ಕಾಗಿ ಆ ಭಾಗದ ನಗರಸಭೆಯ ಸದಸ್ಯರೊಬ್ಬರು ಈ ಎಲ್ಲಾ ಅಕ್ರಮ ಹೋರಾಟದ ನಾಯಕತ್ವವನ್ನು ವಹಿಸಿದ್ದಾರೆ. ಆದರೆ ಜಿಲ್ಲೆಯ ಜನರು ಪ್ರಜ್ಞಾವಂತರು ಬುದ್ದಿವಂತರಾಗಿದ್ದು ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರದಲ್ಲಿ ಮುರ್ಖರನ್ನಾಗಿಸಲು ಸಾಧ್ಯವಿಲ್ಲ. ಉಡುಪಿ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ನ್ಯಾಯದ ಭರವಸೆಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News