ಸ್ಕೇಟಿಂಗ್: ಮುಹಮ್ಮದ್ ಶಾಮಿಲ್ ಅರ್ಷದ್‌ಗೆ ಕಂಚಿನ ಪದಕ

Update: 2021-04-18 12:13 GMT

ಮಂಗಳೂರು, ಎ.18: ರೋಲರ್ ಸ್ಕೇಟಿಂಗ್ ಫೇಡರೇಶನ್ ಆಫ್ ಇಂಡಿಯಾ ವತಿಯಿಂದ ಪಂಜಾಬ್‌ನ ಮೊಹಾಲಿಯಲ್ಲಿ ಮಾ.31ರಿಂದ ಎ.11ರವರೆಗೆ ನಡೆದ 58ನೇ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಂಗಳೂರಿನ ಹೈಫೈಯಸ್ ಸ್ಕೇಟಿಂಗ್ ಕ್ಲಬ್ನ ಸದಸ್ಯ ಮುಹಮ್ಮದ್ ಶಾಮಿಲ್ ಅರ್ಷದ್ 11ರಿಂದ 14 ವರ್ಷದ ಬಾಲಕರ ಇನ್‌ಲೈನ್ ವಿಭಾಗದಲ್ಲಿ ಒನ್‌ಲ್ಯಾಪ್ ರೋಡ್ ರೇಸ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಮಂಗಳೂರಿನ ಅರ್ಷದ್ ಹುಸೇನ್-ರಮ್ಲತ್ ಅರ್ಷದ್ ದಂಪತಿಯ ಪುತ್ರ, ಯೆನೆಪೊಯ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾಗಿರುವ ಶಾಮಿಲ್ ಹೈಫೈಯರ್ಸ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಮೋಹನ್‌ದಾಸ್ ಕೆ ಹಾಗೂ ಜಯರಾಜ್ ಅವರಿಂದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News