ಭಟ್ಕಳದ ನ್ಯೂಶಮ್ಸ್ ಸ್ಕೂಲ್ ನ ನೂತನ ಪ್ರಾಂಶುಪಾಲರಾಗಿ ಚೆನ್ನೈ ಮೂಲದ ಲಿಯಾಖತ್ ಅಲಿ ನೇಮಕ

Update: 2021-04-18 12:27 GMT

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಐ.ಸಿ.ಎಸ್.ಇ ಪಠ್ಯಕ್ರಮದ ನ್ಯೂ ಶಮ್ಸ್ ಸ್ಕೂಲ್ ಇದರ ನೂತನ ಪ್ರಾಂಶುಪಾಲಕರಾಗಿ ತಮಿಳುನಾಡು ಮೂಲದ ಲಿಯಾಖತ್ ಅಲಿ ನೇಮಕಗೊಂಡಿದ್ದು, ರವಿವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

ಚೆನ್ನೈನ ಶ್ರೀರಾಮಕೃಷ್ಣ ಮೆಟ್ರಿಕ್ಯೂಲೇಶನ್ ಸ್ಕೂಲ, ಇಮ್ಯಾನುವೆಲ್ ಮೆಟ್ರಿಕ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಶಿಕ್ಷಕರಾಗಿ, ಅಲ್ ಫಝರ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಸೆಂಟರ್ ಹೆಡ್ ಆಗಿ ಹಾಗೂ ಎಬಿಎಸ್ ಗ್ರೂಪ್ಸ್ ಆಫ್ ಸ್ಕೂಲ್ಸ್ ನಲ್ಲಿ ಉಪ-ಪ್ರಾಂಶುಪಾಲರಾಗಿ ಅಪರಾ ಶೈಕ್ಷಣಿಕ ಅನುಭವ ಹೊಂದಿರುವ ಇವರು, ಬಿಎಸ್ಸಿ, ಎಂ.ಸಿ.ಎ, ಎಂ.ಇಡಿ ಹಾಗೂ ಎಂ.ಬಿ.ಎ ನಲ್ಲಿ ಎಜುಕೇಶನ್ ಮ್ಯಾನೇಜ್ಮೆಂಟ್ ಪದವಿ ಹಾಗೂ ಕಳೆದ ಹತ್ತು ವರ್ಷಗಳಿಂದ ಕರಿಯರ್ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದು ಅಧಿಕಾರ ವಹಿಸಿಕೊಂಡಿರುವ ಅವರು, ಸಂಸ್ಥೆಯ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಿದ್ದು ಎಲ್ಲ ಶಿಕ್ಷಕ ವರ್ಗದ ಸಹಾಯ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸಲಾಗುವುದು. ಸಂಸ್ಥೆಯನ್ನು ಅಭಿವೃದ್ಧಿಸುವಲ್ಲಿ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಎಲ್ಲರೂ ಕೂಡ ಸಮಭಾಗಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಾದಿರ್ ಮೀರಾ ಪಟೇಲ್, ಸದಸ್ಯರಾದ ಎಸ್.ಎಂ.ಸೈಯ್ಯದ್ ಶಕೀಲ್, ಸಲಾಹುದ್ದೀನ್ ಎಸ್.ಕೆ, ಸಲೀಮ್ ಸಾದಾ, ಮೌಲಾನ ಸೈಯದ್ಯ ಝುಬೇರ್ ಎಸ್.ಎಂ, ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಕಾರ್ಯದರ್ಶಿ ಅನಂ ಅಲಾ ಎಂ.ಟಿ, ಸುಹೇಬ್ ಸಾದಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News