×
Ad

ಭಟ್ಕಳ: ಮಾಸ್ಕ್ ಧರಿಸದ 68 ಜನರಿಂದ 6,800 ರೂ. ದಂಡ ವಸೂಲು

Update: 2021-04-18 18:40 IST

ಭಟ್ಕಳ: ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮಾಸ್ಕ್ ಹಾಕದೆ ಇರುವ 68 ಜನರಿಂದ 6,800 ರೂ ದಂಡ ವಸೂಲು ಮಾಡಲಾಗಿದೆ.

ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಡಿ. ದೇವರಾಜು ಹಾಗೂ ಅವರ ತಂಡ 22 ಜನರಿಂದ 2,200 ರೂ. ದಂಡ ವಸೂಲು ಮಾಡಿದ್ದಾರೆ. ಹಾಗೆಯೇ ಜಾಲಿ ಪ.ಪಂ ಮುಖ್ಯಾಧಿಕಾರಿ ಅಜಯ ಭಂಡಾರ್ಕರ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡವು 46 ಜನರಿಂದ 4,600 ರೂ ದಂಡವನ್ನು ವಸೂಲು ಮಾಡಲಾಗಿದೆ. 

ಈ ಕಾರ್ಯಾಚರಣೆಯಲ್ಲಿ ಆರೋಗ್ಯಾಧಿಕಾರಿ ವಿನಾಯಕ ನಾಯ್ಕ, ಇಸ್ಮಾಯಿಲ್ ಗುಬ್ಬಿ, ಅನ್ವರ ಬಾಳೂರು, ಪೌರಕಾರ್ಮಿಕರಾದ ಸತೀಶ್ ಕೃಷ್ಣ, ಕೃಷ್ಣ ಅಣ್ಣಮಲೆ, ಮುರುಘಾ, ನಾಗರಾಜ್, ವಾಹನ ಚಾಲಕ ಶಂಕರ್ ನಾಯ್ಕ, ಸಣ್ಣುಗೊಂಡ, ರವಿಚಂದ್ರ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News