ಉಡುಪಿ: 152 ಮಂದಿಗೆ ಇಂದು ಕೊರೋನ ಸೋಂಕು ದೃಢ

Update: 2021-04-18 14:21 GMT

ಉಡುಪಿ, ಎ.18: ಕೊರೋನ ಎರಡನೇ ಅಲೆ ಉಡುಪಿ ಜಿಲ್ಲೆಯಲ್ಲಿ ತೀವ್ರಗೊಳ್ಳುವ ಸೂಚನೆ ಕಂಡುಬರುತಿದ್ದು, ರವಿವಾರ ಒಟ್ಟು 152 ಮಂದಿ ಸೋಂಕು ತಗುಲಿದೆ. ದಿನದಲ್ಲಿ 75 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈಗ 660 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ. ಇಂದು ಪಾಸಿಟಿವ್ ಬಂದ 152 ಮಂದಿಯಲ್ಲಿ 80 ಮಂದಿ ಪುರುಷರು ಹಾಗೂ 72 ಮಂದಿ ಮಹಿಳೆಯರು. ಇವರಲ್ಲಿ 107 ಮಂದಿ ಉಡುಪಿ ತಾಲೂಕಿನವರಾದರೆ 28 ಮಂದಿ ಕುಂದಾಪುರ ಹಾಗೂ 16 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 152ರಲ್ಲಿ 124 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಾಸಿಟಿವ್ ಬಂದ 152 ಮಂದಿಯಲ್ಲಿ 80 ಮಂದಿ ಪುರುಷರು ಹಾಗೂ 72 ಮಂದಿ ಮಹಿಳೆಯರು. ಇವರಲ್ಲಿ 107 ಮಂದಿ ಉಡುಪಿ ತಾಲೂಕಿನವರಾದರೆ 28 ಮಂದಿ ಕುಂದಾಪುರ ಹಾಗೂ 16 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಯ ಒಬ್ಬರು ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. 152ರಲ್ಲಿ 124 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯು ತಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಮಣಿಪಾಲದಲ್ಲಿ 33 ಮಂದಿ:  ಇಂದು ಪಾಸಿಟಿವ್ ಬಂದವರಲ್ಲಿ 33 ಮಂದಿ ಎಂಐಟಿ ಕಂಟೈನ್‌ಮೆಂಟ್ ಪ್ರದೇಶದ ಬಫರ್ ವಲಯದಲ್ಲಿದ್ದಾರೆ. ಇವರಲ್ಲಿ 32 ಮಂದಿ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಗಳು ಎಂದು ತಿಳಿದುಬಂದಿದೆ. ಕೆಮ್ಮಣ್ಣು ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳಲ್ಲಿ ಸಹ ಸೋಂಕು ಪತ್ತೆಯಾಗಿದೆ.

ಇನ್ನು ಹೊರರಾಜ್ಯ ಹಾಗೂ ಹೊರದೇಶ ಪ್ರಯಾಣದ ಉದ್ದೇಶಕ್ಕಾಗಿ ಕೋವಿಡ್ ಪರೀಕ್ಷೆಗೊಳಪಟ್ಟ 13 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಇವರಲ್ಲಿ ಆರು ಮಂದಿ ಉಡುಪಿ ತಾಲೂಕಿನವರು, ಆರು ಮಂದಿ ಕುಂದಾಪುರ ತಾಲೂಕಿನವರು ಹಾಗೂ ಒಬ್ಬರು ಕಾರ್ಕಳ ತಾಲೂಕಿನವರು ಎಂದು ತಿಳಿದುಬಂದಿದೆ.

ಶನಿವಾರ 75 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 25,887 ಕ್ಕೇರಿದೆ. ನಿನ್ನೆ ಜಿಲ್ಲೆಯ 3539 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 152 ಮಂದಿ ಸೇರಿ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 26,740 ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,65,980 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ಇಂದು ಕೋವಿಡ್‌ಗೆ ಯಾರೂ ಮೃತಪಟ್ಟಿಲ್ಲ. ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 193 ಆಗಿದೆ.

1633 ಮಂದಿಗೆ ಲಸಿಕೆ:  ರವಿವಾರ ಜಿಲ್ಲೆಯಲ್ಲಿ ಒಟ್ಟು 1633 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 1460 ಮಂದಿ ಮೊದಲ ಡೋಸ್‌ನ್ನೂ 173 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ ಕೇವಲ ಐವರು ಮಾತ್ರ ಇಂದು ಲಸಿಕೆಯನ್ನು ಪಡೆದಿದ್ದಾರೆ. ಯಾವೊಬ್ಬ ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಪಡೆಯದಿದ್ದರೂ, ಒಟ್ಟು 1628 ಮಂದಿ ಕೋವಿಡ್ ಮುಂಚೂಣಿ ಕಾರ್ಯಕರ್ತರು ಲಸಿಕೆ ಸ್ವೀಕರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News