ಕೊರೋನ ಸೋಂಕು ಹೆಚ್ಚಳ ಹಿನ್ನಲೆ: ಕೆಂಪು ಗುಲಾಬಿ ಹೂವು, ಮಾಸ್ಕ್ ವಿತರಿಸಿ ಮಾರ್ಷಲ್‌ಗಳಿಂದ ಜಾಗೃತಿ

Update: 2021-04-18 16:10 GMT

ಮಂಗಳೂರು, ಎ.18: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಸೇರುವ ಪ್ರದೇಶದಲ್ಲಿ ಅದರಲ್ಲೂ ನಗರದ ಹಲವು ಕಡೆ ಮಾಸ್ಕ್ ಹಾಕಿಕೊಳ್ಳದೆ ತಿರುಗಾಡುತ್ತಿದ್ದ ಸಾರ್ವಜನಿಕರಿಗೆ ಸಿಲ್ ಡಿಫೆನ್ಸ್ ಹಾಗೂ ಗೃಹರಕ್ಷಕದಳದ ಕೋವಿಡ್ ಮಾರ್ಷಲ್‌ಗಳು ರವಿವಾರ ಕೆಂಪು ಗುಲಾಬಿ ಹೂವು ಹಾಗೂ ಮಾಸ್ಕ್ ವಿತರಿಸಿ, ಕೋವಿಡ್ ಜಾಗೃತಿ ಮೂಡಿಸಿ ಗಮನ ಸೆಳೆದರು.

ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲಿ ಮೋಹನ್ ಚೂಂತಾರು, ಸಮಾಜ ಸೇವಕ ಪ್ರೊ.ಸುರೇಶ್‌ನಾಥ್, ಉದ್ಯಮಿ ಆಲ್ವಿನ್ ಜೋಯೆಲ್ ನೊರೊನ್ಹಾ, ಸಿವಿಲ್ ಡಿಫೆನ್ಸ್‌ನ ಅಜಯ ಕುಮಾರ್ ಮತ್ತಿತರರು ಮಾರ್ಷಲ್‌ಗಳ ಜೊತೆಗೂಡಿ ಮಾಸ್ಕ್ ಧರಿಸಲು ಪ್ರೇರೇಪಿಸಿದರು.ನಗರದ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಸಹಿತ ಪ್ರಮುಖ ಕಡೆ ಸಾರ್ವಜನಿಕರು ಮಾಸ್ಕ್ ಧರಿಸದೆ ಓಡಾಡುತ್ತಿರುವುದು ಕಂಡ ಮಾರ್ಷಲ್‌ಗಳು ಕೋವಿಡ್ ಮುಂಜಾಗ್ರತೆ ವಹಿಸಲು ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News