ಮಂಗಳೂರಿನಲ್ಲಿ ಲೂನಾರ್ ಆಕಳ್ಟೇಷನ್ (ಮಂಗಳ ಗ್ರಹಣ) ವೀಕ್ಷಣೆ

Update: 2021-04-18 16:23 GMT

ಮಂಗಳೂರು, ಎ.18: ನಗರದ ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘದ ರೋಹಿತ್ ಎಸ್. ರಾವ್ ಮಂಗಳ ಗ್ರಹದ ಅಪರೂಪದ ಕಾಸ್ಮಿಕ್ ಘಟನೆ ಲೂನಾರ್ ಆಕಳ್ಟೇಷನ್ (ಗ್ರಹಣ)ವನ್ನು ಶನಿವಾರ ಮಂಗಳೂರಿನಲ್ಲಿ ವೀಕ್ಷಿಸಿದರು ಮತ್ತು ಛಾಯಾಚಿತ್ರ ಸೆರೆಹಿಡಿದರು. ಲೂನಾರ್ ಆಕಳ್ಟೇಷನ್ ಮಂಗಳ ಗ್ರಹದ ಮುಂದೆ ಚಂದ್ರ ಹಾದುಹೋದಾಗ ಸಂಭವಿಸುತ್ತದೆ. ಇದು ಗ್ರಹಣಕ್ಕೆ ಹೋಲುತ್ತದೆ.

ಚಂದ್ರ ಭೂಮಿಗೆ ತುಂಬಾ ಹತ್ತಿರದಲ್ಲಿರುವುದರಿಂದ ಮತ್ತು ಮಂಗಳವು ತುಂಬಾ ದೂರದಲ್ಲಿರುವುದರಿಂದ ಚಂದ್ರನಿಗೆ ಹೋಲಿಸಿದರೆ ಮಂಗಳವು ಒಂದು ಚುಕ್ಕೆಯಂತೆ ತೋರುತ್ತದೆ ಎಂದು ರಾವ್ ಹೇಳಿದ್ದಾರೆ.

ಮಂಗಳವು ಆಗಾಗ ಚಂದ್ರನ ಹತ್ತಿರದಿಂದ ಹಾದು ಹೋಗುವುದಾದರೂ ಚಂದ್ರನಿಂದ ಸಂಪೂರ್ಣವಾಗಿ ಮುಚ್ಚುವುದು ಖಗೋಳ ಸ್ಥಾನಗಳನ್ನು ಅವಲಂಬಿಸಿ ವಿಶ್ವದ ವಿವಿಧ ಭಾಗಗಳಿಂದ ಮಾತ್ರ ವಿರಳವಾಗಿ ನೋಡಬಹುದು. ಹಿಂದಿನ ಲೂನಾರ್ ಆಕಳ್ಟೇಷನ್ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಿಂದ ಮಾತ್ರ ವೀಕ್ಷಿಸಬಹುದಾಗಿತ್ತು.

ಈ ಗ್ರಹಣವು ಶನಿವಾರ ಭಾರತದಾದ್ಯಂತ ವೀಕ್ಷಿಸಬಹುದಾಗಿತ್ತು. ಉಡುಪಿ ಮತ್ತು ದ.ಕ.ಜಿಲ್ಲೆಯಲ್ಲಿ ಶನಿವಾರ ಸಂಜೆ 5:08ಕ್ಕೆ ಪ್ರಾರಂಭಗೊಂಡು ಸಂಜೆ 7:20ಕ್ಕೆ ಮುಕ್ತಾಯಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News