ಉಡುಪಿ: ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ
Update: 2021-04-18 22:20 IST
ಉಡುಪಿ, ಎ.18: ಮೂಡಬೆಟ್ಟು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲ ವತಿಯಿಂದ ಅನಾರೋಗ್ಯ ಪೀಡಿತರಾದ ಸಂಸ್ಥೆಯ ಸದಸ್ಯೆ ಬೇಬಿ ಐತಪ್ಪಅವರಿಗೆ ಸಹಾಯಧನ ವಿತರಿಸಲಾಯಿತು.
ಈಗಾಗಲೇ ಒಂದು ವರ್ಷದ ಅವಧಿಯಲ್ಲಿ ಮದುವೆ, ಶಿಕ್ಷಣ ಹಾಗೂ ಅನಾರೋಗ್ಯಕ್ಕೆ ಒಳಗಾದ ಲಹರಿ, ಯಮುನಾ, ಪ್ರಮೀಳಾ, ಕಮಲ ಮತ್ತು ಇತರ ಕಾರ್ಯಗಳಿಗೆ ಒಟ್ಟು 35000ರೂ. ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಟೀಚರ್, ಅಧ್ಯಕ್ಷೆ ಜಾನಕಿ, ಕಾರ್ಯದರ್ಶಿ ಸುಜಾತ, ಕೋಶಾಧಿಕಾರಿ ಶ್ರೀಲತಾ ಯುವಕ ಮಂಡಲದ ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಶ್ರೀಕಾಂತ್, ಶಿವಾನಂದ ಮೂಡುಬೆಟ್ಟು, ಮೋಹಿನಿ, ಯಮುನಾ, ಶಾರದಾ, ಶಾಂತ ಮೊದಲಾದವರು ಉಪಸ್ಥಿತರಿದ್ದರು.