ಬಿಲ್ಲವರನ್ನು ಕೇವಲ ಮೂರ್ತೆಧಾರಿಕೆಗೆ ಸೀಮಿತಗೊಳಿಸುವ ಹುನ್ನಾರ: ಮಾಜಿ ಸಚಿವ ಸೊರಕೆ

Update: 2021-04-18 16:52 GMT

ಕುಂದಾಪುರ, ಎ.18: ಸೈನ್ಯ, ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ, ಉದ್ಯಮ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಿಲ್ಲವ ಸಮುದಾಯವನ್ನು ಕೇವಲ ಮೂರ್ತೆಧಾರಿಕೆಗೆ ಸೀಮಿತಗೊಳಿಸುವ ಹುನ್ನಾರದಿಂದ ಹೊರಬರ ಬೇಕಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದ್ದಾರೆ.

ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ರವಿವಾರ ಕುಂದಾಪುರ ಶ್ರೀನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಸಾಧಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿದ್ಯೆಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಿದ್ಯೆಗೆ ಮಾತ್ರ ಬಡತವನ್ನು ಹೋಗಲಾಡಿಸುವ ಶಕ್ತಿ ಇದೆ. ಮಕ್ಕಳಲ್ಲಿ ಜ್ಞಾನಾವರಣಕ್ಕೆ ಅವಕಾಶ ಕಲ್ಪಿಸಬೇಕು. ಪ್ರತಿಯೊಂದು ಸಮಾಜ ಸಂಘಟನೆಗಳು ಅವರವರ ದ್ಯೇಯೋ ದ್ದೇಶಗಳ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕು ಎಂದರು.

ರಾಜ್ಯದ ಸಂಪುಟ ಸಚಿವರಾಗಿ ಸಾಕಷ್ಟು ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿರುವ ಕೋಟ ಶ್ರೀನಿವಾಸ ಪೂಜಾರಿಗೆ ತನ್ನದೇ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗುವ ಅವಕಾಶ ದೊರೆಯದಿರುವುದು ಬೇಸರದ ಸಂಗತಿ. ರಾಜಕೀಯ ದಲ್ಲಿ ಮತ್ಸರ ಎಂಬುದು ಇರಬಾರದು ಎಂದು ಅವರು ಹೇಳಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರ ಗಳಲ್ಲಿ ಬೆಳವಣಿಗೆ ಸಾಧಿಸಿದಲ್ಲಿ ಸಮಾಜಗಳು ಅಭಿವೃದ್ಧಿಯಾಗುತ್ತದೆ. ಸಂಘ ಟನೆಗಳು ನಿಂತ ನೀರಾಗದೆ ಹರಿಯುವ ನೀರಾಗಬೇಕು. ಭವಿಷ್ಯದ ಪೀಳಿಗೆಯ ಯುವ ಸಮುದಾಯಕ್ಕೆ ನಾಯಕತ್ವ ಅವಕಾಶಗಳು ದೊರಕಬೇಕು. ತುಳು ನಾಡಿನ ವೀರ ಪುರುಷರಾದ ಕೋಟಿ-ಚನ್ನಯ್ಯರ ಬದುಕಿನ ಆದರ್ಶಗಳು ನಮಗೆ ನಿತ್ಯ ಸ್ಮರಣೀಯವಾಗಬೇಕು ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಬಿಲ್ಲವರು, ಈಡಿಗರು, ನಾಮಧಾರಿಗಳು, ಕೇರಳದಲ್ಲಿ ತೀಯಾ, ಆಂಧ್ರದಲ್ಲಿ ಗೌಡರ್, ತಮಿಳುನಾಡಿನಲ್ಲಿ ನಾಡವರ್, ಗೋವಾದಲ್ಲಿ ಭಂಡಾರಿ, ಉತ್ತರ ಭಾರತದಲ್ಲಿ ಗುಪ್ತಾಸ್ ಸೇರಿದಂತೆ ದೇಶಾದ್ಯಾಂತ ಬಿಲ್ಲವ ಸಮುದಾಯ ಬೇರೆ ಬೇರೆ ಹೆಸರಿನಲ್ಲಿ ಗುರುತಿಸಿಕೊಂಡಿದೆ. ಎಲ್ಲ ಸಮಾಜ ದವರೊಂದಿಗೆ ಪ್ರೀತಿ, ವಿಶ್ವಾಸದ ನಡೆಯೊಂದಿಗೆ ನಮ್ಮ ಸಮಾಜವನ್ನು ಬೆಳೆಸುವ ಗುರಿ ಸಂಘಟನೆಯವರಲ್ಲಿ ಇಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ವಹಿಸಿದ್ದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಬಿಲ್ಲವ ಸೇವಾ ಸಂಘದ ಉಪಾಧ್ಯಕ್ಷರಾದ ಭಾಸ್ಕರ ಬಿಲ್ಲವ, ರಾಮ ಪೂಜಾರಿ, ನಾರಯಣಗುರು ಯುವಕ ಮಂಡಲ ಅಧ್ಯಕ್ಷ ಶ್ರೀನಾಥ್ ಪೂಜಾರಿ ಕಡ್ಗಿಮನೆ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆಶೆಶಿಕಲಾ ಬಿಜೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾಸ್ಕರ ಬಿಲ್ಲವ, ವಿಜಯ ಎಸ್.ಪೂಜಾರಿ, ಮಹೇಂದ್ರ ಕುಮಾರ ಪೂಜಾರಿ, ಜ್ಯೋತಿ ಉದಯ್ ಕುಮಾರ ಪೂಜಾರಿ, ಶೇಖರ ಪೂಜಾರಿ ಹುಂಚಾರಬೆಟ್ಟು, ಕೆ.ಪಿ.ಶೇಖರ ಪೂಜಾರಿ, ವಿಶ್ವನಾಥ ಪೂಜಾರಿ ಗರಡಿಮನೆ ಹಾಗೂ ಗ್ರಾಪಂ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ ಬಿಲ್ಲವ ಸಮುದಾಯದ ಗ್ರಾಪಂ ಸದಸ್ಯರನ್ನು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಭಿನಂದಿಸಿದರು.

ಗಣೇಶ್ ಪೂಜಾರಿ ವಿಠ್ಠಲವಾಡಿ ಸ್ವಾಗತಿಸಿದರು. ಭಾಸ್ಕರ್ ವಿಠ್ಠಲವಾಡಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News