ಗ್ರಾಮಚಾವಡಿ: ಬ್ರಹ್ಮಶ್ರೀ ನಾರಾಯಣ ಗುರು ಸಂಘದ ವಾರ್ಷಿಕ ಮಹಾಸಭೆ

Update: 2021-04-19 12:10 GMT

ಕೊಣಾಜೆ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಗ್ರಾಮಚಾವಡಿ‌ ಇದರ ವಾರ್ಷಿಕ ಮಹಾಸಭೆಯು ಮಂದಿರದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಪಾವೂರು ಇವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.

ಸಭೆಯಲ್ಲಿ ಗ್ರಾಮಗಳ ವರದಿ ಮಂಡನೆಯ ನಂತರ 2021-22ನೇ ಸಾಲಿಗೆ ನೂತನ ಪದಾದಿಕಾರಿಗಳ ಆಯ್ಕೆ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಹಾಸ್ ಅಮಿನ್ ಹರೇಕಳ, ಉಪದ್ಯಾಕ್ಷರಾಗಿ ಹರೀಶ್  ಪೂಜಾರಿ  ಕೊಣಾಜೆ,  ಪ್ರದಾನ ಕಾರ್ಯದರ್ಶಿಯಾಗಿ ಕೃಷ್ಣಪ್ರಸಾದ್ ಪಜೀರು, ಕೋಶಾಧಿಕಾರಿಯಾಗಿ ವಿಜಯಕುಮಾರ್ ಕಿಲ್ಲೂರು, ಜೊತೆ ಕಾರ್ಯದರ್ಶಿಯಾಗಿ ಸುಭಾಷ್ ಧರ್ಮನಗರ, ಮಹಿಳಾ ಘಟಕದ ಅಧ್ಯಕ್ಷರಾಗಿ ಸುಜಾತ ಹರೇಕಳ, ಉಪಾಧ್ಯಕ್ಷರಾಗಿ ಗೀತಾ ಕುಂದರ್, ಕಾರ್ಯದರ್ಶಿ ಬಬಿತ ಬಾನಬೆಟ್ಟು, ಲೆಕ್ಕ ಪರಿಶೋಧಕರಾಗಿ ಗಂಗಾಧರ ಮಾಸ್ಟರ್ ಪಜೀರು ಇವರನ್ನು ಆಯ್ಕೆ ಮಾಡಲಾಯಿತು. ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ್ ಹರೇಕಳ,  ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್ ಇನೋಳಿ ಇವರನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ 5 ಗ್ರಾಮಕ್ಕೆ ಒಳಪಟ್ಟ ಸಂಘದ ಸದಸ್ಯರು ಭಾಗವಹಿಸಿದ್ದರು. ಪ್ರದಾನ ಕಾರ್ಯದರ್ಶಿ ರವೀಂದ್ರ ಕೊಣಾಜೆ ಸ್ವಾಗತಿಸಿದರು. ಜೊತೆ  ಕಾರ್ಯದರ್ಶಿ ಬಬಿತ ಬಾನಬೆಟ್ಟು ವರದಿ ವಾಚಿಸಿದರು, ಕೊಶಾದಿಕಾರಿ ರಮೇಶ್ ಮರ್ಕಮೆ ವಂದಿಸಿದರು.

 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News