ರಿಕ್ಷಾ ಚಾಲಕರಿಗೆ 'ಉಚಿತ ಲಸಿಕೆ ಅಭಿಯಾನ’ ಕಾರ್ಯಕ್ರಮ

Update: 2021-04-19 12:34 GMT

ಮಂಗಳೂರು, ಎ.19: ಮಂಗಳೂರು ಮ್ಯಾಕೊ ಕೋಪರೇಟಿವ್ ಸೊಸೈಟಿ ವತಿಯಿಂದ ರಿಕ್ಷಾ ಚಾಲಕರಿಗೆ ಉಚಿತ ಲಸಿಕೆ ಶಿಬಿರವನ್ನು ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ನಗರದ ಬಲ್ಮಠ ಪೆಟ್ರೋಲ್ ಬಂಕ್‌ನ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮ್ಯಾಕೋ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ಐವನ್ ಡಿಸೋಜ ಎಲ್ಲಾ ಕಾರ್ಮಿಕರು ಲಸಿಕೆ ಪಡೆದುಕೊಳ್ಳುವ ಮೂಲಕ ಕೊರೋನ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಸೊಸೈಟಿಯ ನಿರ್ದೇಶಕರಾದ ಶೇಖರ್ ದೇರಳಕಟ್ಟೆ, ಬಬಿತಾ ಡಿಸೋಜ, ಸಂಜೀವ ಒಕ್ಕಲಿಗ, ಗ್ರೆಗೊರಿ ಡಿಸೋಜ, ಹಬೀಬುಲ್ಲಾ, ಅಶಿತ್ ಪಿರೇರಾ, ವಿವೇಕ್ ರಾಜ್ ಪೂಜಾರಿ, ಭಾಸ್ಕರ್ ರಾವ್, ಸವಾದ್ ಗೂನಡ್ಕ,, ಮ್ಯಾಕೋ ಕಾರ್ಯದರ್ಶಿ ದಿನೇಶ್ ಕುಮಾರ್, ಶಶಿಕಾಂತ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News