ಮಲ್ಲಿಗೆ ಗಿಡಗಳ ಮಾರುಕಟ್ಟೆ ಸೃಷ್ಟಿ ಮಾಡಿ: ರಾಮಕೃಷ್ಣ ಶರ್ಮ

Update: 2021-04-19 12:51 GMT

ಕೋಟೇಶ್ವರ, ಎ.19: 5-10 ಸೆಂಟ್ಸ್‌ನಷ್ಟು ಸ್ವಲ್ಪವೇ ಜಮೀನು ಇದ್ದಾಗಲೂ ವೈಜ್ಞಾನಿಕವಾಗಿ ಕಡಿಮೆ ಖರ್ಚಿನಲ್ಲಿ ಮಲ್ಲಿಗೆ ಹೂವನ್ನು ಮಾತ್ರವಲ್ಲ, ಗಿಡಗಳನ್ನೂ ಬೆಳೆಸಿ ವಾರಕ್ಕೆ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ. ಕುಂಭಾಶಿ ಪಣ್‌ಹತ್ವಾರಬೆಟ್ಟುನ ಕೃಷಿಕೆ ಪ್ರೇಮ ಪೂಜಾರಿ ಅವರ ಮನೆ ವಠಾರದಲ್ಲಿ ರವಿವಾರ ಮಲ್ಲಿಗೆ ಬೆಳೆಗಾರರ ಒಕ್ಕೂಟದ ಮಲ್ಲಿಗೆ ಕಟ್ಟೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾಗಿ ಮಾತನಾಡಿದರು. ಕೃಷಿಕ ಶ್ರೀಧರ ದೇವಾಡಿಗ ಅವರು ಮಲ್ಲಿಗೆ ಕಟ್ಟೆಯನ್ನು ಉದ್ಘಾಟಿಸಿದರು. ನಿವೃತ್ತ ತೋಟಗಾರಿಕಾ ಇಲಾಖೆ ಅಧಿಕಾರಿ ಕುಚೇಲಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಮಹಿಳಾ ಸಾಂತ್ವನ ಸಹಾಯವಾಣಿ ಅಧ್ಯಕ್ಷೆ ರಾಧಾದಾಸ್, ಜಿಲ್ಲಾ ಕೃಷಿಕ ಸಂಘ ಕುಂದಾಪುರ ವಲಯದ ರೋನಾಲ್ಡ್ ಡಿಸೋಜಾ ಆನಗಳ್ಳಿ, ಚಂದ್ರ ಪೂಜಾರಿ ಬಾಳೆಬೈಲು, ಸಂಯೋಜಕ ರಮೇಶ್ ಪೂಜಾರಿ ಕ್ಯಾಸನಮಕ್ಕಿ ಭಾಗವಹಿಸಿದ್ದರು.

ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವತಿ ಗಾಣಿಗ ಸ್ವಾಗತಿಸಿದರು. ರಮ್ಯ ಪೂಜಾರಿ, ಸುರೇಖಾ ಶಿವಾನಂದ, ಕವನ, ಆಶಾ, ಪಲ್ಲವಿ, ಮನು, ಕಿರಣ, ಗಣೇಶ್, ಸದಾನಂದ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಕೆ. ನೆಲ್ಲಿಬೆಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News