ಕೊಡವೂರು ಮಸೀದಿ ಜಮೀನಿನಲ್ಲಿ ಕಾನೂನು ಬಾಹಿರ ಚಟುವಟಿಕೆ, ಆತಂಕ ಸೃಷ್ಟಿ: ಆರೋಪ

Update: 2021-04-19 13:43 GMT

ಉಡುಪಿ, ಎ.19: ಕೊಡವೂರು ಕಲ್ಮಾತ್ ಮಸೀದಿಯ ಅಧಿಕೃತ ಜಮೀನಿಗೆ ಅಕ್ರಮ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿ, ನಮಾಝಿಗಳಿಗೆ ಆತಂಕ ಸೃಷ್ಟಿಸುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಉಡುಪಿ ಚಾಪ್ಟರ್ ಎ.15ರಂದು ದೂರು ನೀಡಿದ್ದು, ಅದರಂತೆ ಆಯೋಗ ದೂರನ್ನು ನೋಂದಾಣಿ ಮಾಡಿಕೊಂಡಿದೆ.

ಕಲ್ಮಾತ್ ಜಾಮೀಯಾ ಮಸೀದಿ ಸರ್ವೆ ನಂಬರ್ 53/06 ಇದರಲ್ಲಿ ಕಳೆದ 200 ವರ್ಷಕ್ಕಿಂತ ಹೆಚ್ಚು ಸಮಯದಿಂದ ಅಸ್ತಿತ್ವದಲ್ಲಿದೆ. 1908ರಿಂದ ಈ ಮಸೀದಿಯ ನಿರ್ವಹಣೆಗೆ ಸರಕಾರದ ಬೊಕ್ಕಸದಿಂದಲೇ ತಸ್ತಿದಿಕ್ ಬರುತ್ತಿದೆ. 28 ವರ್ಷಗಳ ಹಿಂದೆ ಅಂದರೆ 1993ರ ಮಾ.16ರಂದು ಕರ್ನಾಟಕ ವಕ್ಫ್ ಬೋರ್ಡಿನಲ್ಲಿ ಮಸೀದಿಯ ಸ್ಥಿರಾಸ್ತಿ ನೊಂದಾವಣಿಯಾಗಿದ್ದು, 2020ರ ಮಾ.16ರಂದು ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಅಧೀನದಲ್ಲಿ ನೊಟಿಫೀಕೆಷನ್ ಮಾಡುವುದಾರ ಮುಖಾಂತರ ವಕ್ಫ್ ಆಸ್ತಿಯನ್ನು ಪ್ರಕಟಿಸಿದೆ.

ಅದರಂತೆ ಕಂದಾಯ ಇಲಾಖೆಯು ಅಧಿಕೃತ ಪ್ರಕ್ರಿಯೆ ಮೂಲಕ ಕಲ್ಮಾತ್ ಜಾಮೀಯಾ ಇದರ ಸ್ಥಿರಾಸ್ತಿಯ ಪಹಣಿಯಲ್ಲಿ ಮಸೀದಿಯ ಹೆಸರು ನೊಂದಾ ಯಿಸಲ್ಪಟ್ಟಿದೆ. ಈಗಾಗಲೇ ವಕ್ಫ್ಗೊಳಿಸಲ್ಪಟ್ಟ ಮಸೀದಿಯ ಜಮೀನಿನಲ್ಲಿ ಈ ಆಸ್ತಿಗೆ ಸಂಬಂಧ ಪಡದ ವ್ಯಕ್ತಿಗಳು ಅಕ್ರಮವಾಗಿ ಮೂರ್ತಿಯನ್ನು ಸ್ಥಾಪಿಸಿ, ಟೆಂಟ್ನ್ನು ನಿರ್ಮಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

2021ರ ಎ.13ರಂದು ತತಾಕಥಿತ ಪಂಚ ಧೂಮವತಿ ಹೋರಾಟ ಸಮಿತಿಯೆಂಬ ಹೆಸರಿನಲ್ಲಿ ಯಾವುದೇ ಅನುಮತಿಯಿಲ್ಲದೆ ಕಿಡಿಗೇಡಿಗಳು ಮಸೀದಿಯ ಜಮೀನನಲ್ಲಿ ಅಕ್ರಮ ಕೂಟ ಸೇರಿ ಆತಂಕದ ಹಾಗೂ ಅಶಾಂತಿಯ ವಾತವರಣ ಸೃಷ್ಟಿಸಿ ಸ್ಥಳೀಯ ಮುಸ್ಲಿಮರಿಗೆ ನಮಾಝ್ ಮಾಡಲು ತಡೆಯೊಡ್ಡಿ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಮಸೀದಿಯ ಜಮೀನಿನಲ್ಲಿ ಅಳವಡಿಸಲ್ಪಟ್ಟ ಸಿಸಿ ಕೆಮೆರಾವನ್ನು ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಕಿತ್ತೆಸೆದಿದ್ದಾರೆ. ಈ ದುಷ್ಕೃತ್ಯ ನಡೆಸಿದ ಕಿಡಿಗೇಡಿಗಳ ನೇತೃತ್ವವನ್ನು ಸ್ಥಳೀಯ ನಗರ ಸಭೆಯ ಸದಸ್ಯ ವಹಿಸಿದ್ದು ಇದರೊಂದಿಗೆ ಇತರರು ಭಾಗಿಯಾಗಿದ್ದಾರೆ. ಈ ಕೃತ್ಯದ ಮೂಲಕ ಸಂವಿಧಾನ ಕೊಡಲ್ಪಟ್ಟಂತಹ ಮೂಲಭೂತ ಹಕ್ಕುಗಳ ಪೈಕಿ ಧಾರ್ಮಿಕ ಹಕ್ಕಿನ ಬಹಿರಂಗ ವಾಗಿ ಒತ್ತಾಯ ಪೂರ್ವಕ ನಿರಾಕರಣೆ ಮಾಡುತ್ತಿದ್ದಾರೆ.

ಈ ಎಲ್ಲ ಕಾರಣಗಳಿಂದ ಆ ಪ್ರದೇಶದಲ್ಲಿ ಭಯದ ವಾತವರಣ ನಿರ್ಮಾಣ ಗೊಂಡಿದ್ದು ತಾವು ತಮ್ಮ ಕಾನೂನು ಬದ್ದ ನಿಯಮಗಳ ಪ್ರಕಾರ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಂಡು ಮಸೀದಿಯ ನಮಾಝಿ ಗಳಲ್ಲಿ ಭರವಸೆ ಮೂಡಿಸಲು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಂಬಂಧ ಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಎಪಿಸಿಆರ್ ಉಡುಪಿ ಚಾಪ್ಟರ್ ಅಧ್ಯಕ್ಷ ಹುಸೇನ್ ಕೋಡಿಬೆಂಗ್ರೆ ಒತ್ತಾಯಿಸಿದ್ದಾರೆ.

ಮಸೀದಿ ಕಾಲುದಾರಿಗೆ ಹಾಕಿರುವ ಗೇಟ್ ತೆರವಿಗೆ ಆಗ್ರಹ

ಕೊಡವೂರು ಗ್ರಾಮದ 53/6 ಸರ್ವೆ ನಂಬರ್‌ನಲ್ಲಿರುವ ಕಲ್ಮಾತ್ ಮಸೀದಿಗೆ ತೆರಳುವ ಕಾಲುದಾರಿಗೆ ಕಿಡಿಗೇಡಿಗಳು ಕಾನೂನು ಬಾಹಿರವಾಗಿ ಗೇಟ್ ಆಳವಡಿಸಿರುವುದಾಗಿ ಆರೋಪಿಸಿ ಮಸೀದಿಯ ನಿಯೋಗವೊಂದು ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಉಡುಪಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ. ಮಸೀದಿಯಲ್ಲಿ ಶ್ರದ್ಧಾಳುಗಳು ಎ.18ರಂದು ಮಧ್ಯಾಹ್ನ ನಮಾಝ್ ಮುಗಿಸಿ ವಾಪಾಸ್ಸು ಬರುವಾಗ ಕಾನೂನು ಬಾಹಿರವಾಗಿ ಹೊಸತಾಗಿ ಒಂದು ಬೇಲಿ ಯನ್ನು ಆಳವಡಿಸಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಅವರು ಹಾರಿಕೆ ಉತ್ತರ ನೀಡಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ ರಮ ಝಾನ್ ತಿಂಗಳಲ್ಲಿ ನಮಾಝ್ ಮಾಡದಂತೆ ಆಗಿದೆ. ಇದರಿಂದ ಶ್ರದ್ಧಾಳು ಗಳಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಅನ್ಯಾಯ ಆಗಿದೆ ಎಂದು ದೂರಲಾಗಿದೆ.

ಈ ಕೃತ್ಯದಿಂದ ಕಲ್ಮತ್ ಮಸೀದಿಯ ಶ್ರದ್ಧಾಳುಗಳ ಮೂಲಭೂತ ಹಕ್ಕನ್ನು ಕಸಿಯಲಾಗಿದೆ. ಈ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರಗಿಸಿ ಮಸೀದಿಗೆ ಹೋಗಲು ಈ ಮೊದಲಿನಂತೆ ಅನುವು ಮಾಡಿಕೊಡ ಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News