ಶಾಲಾ ಕಾಲೇಜು ಪರೀಕ್ಷೆ ಮುಂದೂಡಲು ಮಾಜಿ ಮೇಯರ್ ಸಲಹೆ

Update: 2021-04-19 14:28 GMT

ಮಂಗಳೂರು, ಎ.19: ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ನಡುವೆ ಸರಕಾರವು ರಾಜ್ಯದ ಶಾಲಾ ಕಾಲೇಜು ಮಕ್ಕಳು ಹಾಗೂ ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಮೇಯರ್, ಮನಪಾ ಸದಸ್ಯ ಶಶಿಧರ ಹೆಗ್ಡೆ ಆರೋಪಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರಕಾರವು ಈಗಾಗಲೇ ಸಿಬಿಎಸ್‌ಇಯ 10ನೆ ಹಾಗೂ 12ನೆ ತರಗತಿ, ಜೆಇಇ ಹಾಗೂ ನೀಟ್ ಪರೀಕ್ಷೆಗಳನ್ನು ಮುಂದೂಡಿದೆ. ರಾಜ್ಯ ಸರಕಾರ ಕೂಡಾ ಎಸೆಸೆಲ್ಸಿ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಬೇಕು ಅಥವಾ ಆನ್‌ಲೈನ್ ಮೂಲಕ ನಡೆಸಬೇಕು. ವಿಟಿಯು ಪರೀಕ್ಷೆಗಳನ್ನು ಕೂಡಾ ಮುಂದೂಡಬೇಕು ರಎಂದು ಅವರು ಆಗ್ರಹಿಸಿದ್ದಾರೆ.

ಮಕ್ಕಳ ಆರೋಗ್ಯಕ್ಕಿಂತ ಅವರ ಅಂಕಗಳು ಮುಖ್ಯವೇ ಎಂದು ಪ್ರಶ್ನಿಸಿರುವ ಅವರು, ಪ್ರತಿ ಪರೀಕ್ಷೆಗೂ ಕೊರೋನ ನೆಗೆಟಿವ್ ವರದಿಯನ್ನು ಪಡೆಯುತ್ತಿರುವುದು ಕಷ್ಟಸಾಧ್ಯ. ಸಾರ್ವಜನಿಕ ವಾಹನಗಳ ಮೂಲಕ ಮಕ್ಕಳು ಪರೀಕ್ಷಾ ಕೇಂದ್ರಗಳಿಗೆ ತೆರಳುವುದು ಕೂಡಾ ಅಪಾಯಕಾರಿ. ಧಾರ್ಮಿಕ, ಮದುವೆ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ನಿಷೇಧ ಹೇರುವ ಸರಕಾರ ಪರೀಕ್ಷೆಗಳನ್ನು ಸರಕಾರ ನಡೆಸುವುದೆಂದರೆ ಏನರ್ಥ? ಮಕ್ಕಳ ಪ್ರಾಣಕ್ಕೆ ಯಾವುದೇ ಬೆಲೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News