ಮಂಗಳೂರಿನಲ್ಲಿ ಮತ್ತೆ ಎರಡು ಕಂಟೈನ್ಮೆಂಟ್ ವಲಯ ಘೋಷಣೆ

Update: 2021-04-19 15:15 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.19: ನಗರದ ಕೋಚಿಂಗ್ ಸೆಂಟರ್‌ನ 13 ವಿದ್ಯಾರ್ಥಿಗಳು ಮತ್ತು ಒಂದೇ ಮನೆಯ 6 ಮಂದಿಗೆ ಕೊರೋನ ಪಾಸಿಟಿವ್ ಆಗಿರುವುದರಿಂದ ಸೋಮವಾರ ನಗರದಲ್ಲಿ ಎರಡು ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿದೆ ಎಂದು ಡಿಎಚ್‌ಒ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ನಗರದ ಬಿಜೈ ಕಾಪಿಕಾಡ್‌ನ ಕೋಚಿಂಗ್ ಸೆಂಟರ್‌ನ 13 ವಿದ್ಯಾರ್ಥಿಗಳಿಗೆ ಮತ್ತು ಕುಂಜತ್ತಬೈಲ್‌ನ ಒಂದೇ ಮನೆಯ 6 ಮಂದಿಗೆ ಕೊರೋನ ಪಾಸಿಟಿವ್ ಇರುವುದು ಸೋಮವಾರ ದೃಢಪಟ್ಟಿವೆ. ಆ ಹಿನ್ನೆಲೆಯಲ್ಲಿ ಕೋಚಿಂಗ್ ಸೆಂಟರ್ ಮತ್ತು ಮನೆಯನ್ನು ಕಂಟೈನ್ಮೆಂಟ್ ವಲಯಗಳಾಗಿ ಗುರುತಿಸಲಾಗಿದೆ.

ಇದರೊಂದಿಗೆ ನಗರದಲ್ಲಿ 10 ಮತ್ತು ಬೆಳ್ತಂಗಡಿಯಲ್ಲಿ 2 ಹೀಗೆ ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್ಮೆಂಟ್ ವಲಯಗಳಿವೆ. ಕೊರೋನ ಪಾಸಿಟಿವ್‌ಗಳಾದವರ ಪೈಕಿ ಹೆಚ್ಚಿನವರು ಆಸ್ಪತ್ರೆಗಿಂತಲೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News