ಕೇರಳದಲ್ಲೂ ಇಂದಿನಿಂದ ರಾತ್ರಿ ಕರ್ಫ್ಯೂ

Update: 2021-04-20 03:47 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ, ಎ.20: ಕೇರಳದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ(ಎ.20)ದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಕೋವಿಡ್-19 ನಿರ್ವಹಣಾ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ರಾತ್ರಿ ಕರ್ಫ್ಯೂ ನಿಯಮಾವಳಿಯ ಪ್ರಕಾರ ರಾತ್ರಿ 9ರಿಂದ ಮುಂಜಾನೆ 5ರ ಅವಧಿಯಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ಇಲ್ಲ. ಅಗತ್ಯ ಸೇವೆಗಳಾದ ಔಷಧಿ ಮಳಿಗೆ, ಆಸ್ಪತ್ರೆ, ಪೆಟ್ರೋಲ್ ಬಂಕ್, ರಾತ್ರಿ ಪಾಳಿಯ ಉದ್ಯೋಗಿಗಳು, ಹಾಲು, ಪತ್ರಿಕೆ, ಮಾಧ್ಯಮ, ಸರಕು ಸಾಗಣೆ ಮತ್ತು ಸಾರ್ವಜನಿಕ ಸಾರಿಗೆಗೆ ರಾತ್ರಿ ನಿರ್ಬಂಧದಿಂದ ವಿನಾಯ್ತಿ ಇದೆ.

ಟ್ಯೂಷನ್ ಕೇಂದ್ರಗಳು ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸಲು ಅವಕಾಶವಿದ್ದು, ಭೌತಿಕ ತರಗತಿ ನಡೆಸುವಂತಿಲ್ಲ. ಎಲ್ಲ ಮಾಲ್ ಮತ್ತು ಸಿನೆಮಾ ಹಾಲ್‌ಗಳು ರಾತ್ರಿ 7:30ರ ಒಳಗೆ ಮುಚ್ಚಬೇಕು. ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆ ಮಿತಿಗೊಳಿಸಬೇಕು ಎಂದು ಆದೇಶಿಸಲಾಗಿದೆ.

ಎಲ್ಲ ಸರ್ಕಾರಿ ಇಲಾಖೆಗಳ ಪರೀಕ್ಷೆಗಳನ್ನು ಎರಡು ವಾರ ಮುಂದಕ್ಕೆ ಹಾಕಲಾಗಿದೆ. ಕೇಂದ್ರ ಲೋಕಸೇವಾ ಆಯೋಗಕ್ಕೂ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News