ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ

Update: 2021-04-20 04:18 GMT

ಮಂಗಳೂರು, ಎ.20: ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಮಹಿಳಾ ಅಸ್ತಿತ್ವಕ್ಕೆ ಬಂದಿದೆ.

ಇತ್ತೀಚೆಗೆ ಪಕ್ಷದ ಜಿಲ್ಲಾ ಕಚೇರಿ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ವೆಲ್ಪೇರ್ ಭವನದಲ್ಲಿ ಜಿಲ್ಲಾ ಮಹಿಳಾ ಘಟಕವನ್ನು ರಚಿಸಲಾಯಿತು.

ಸಭೆಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ  ತಲ್ಹತ್ ಯಾಸ್ಮೀನ್ ಪಕ್ಷದ ಧ್ವಜವನ್ನು ದ.ಕ.  ಜಿಲ್ಲಾ ಮಹಿಳಾ ನಿಯೋಜಿತ ಅಧ್ಯಕ್ಷೆ ಆಯಿಷಾ ಮಮ್ತಾಝ್ ರಿಗೆ ಹಸ್ತಾಂತರಿಸುವ ಮೂಲಕ ಘಟಕಕ್ಕೆ ಚಾಲನೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ. ಕ. ಜಿಲ್ಲಾಧ್ಯಕ್ಷ ಅಡ್ವೋಕೇಟ್ ಸರ್ಫ್ರಾಝ್ ಮಾತನಾಡಿ, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಯೋಜನೆಯಿದ್ದು, ಅದರಂತೆ ಸಮಾಜದ ಎಲ್ಲಾ ಸ್ತರಗಳಲ್ಲಿನ ಮಹಿಳೆಯರನ್ನೂ ಸೇರಿಸಿ ಬಹಳ ಕ್ರಿಯಾಶೀಲ ಮತ್ತು ಪ್ರಬಲವಾದ ಮಹಿಳಾ ಘಟಕವನ್ನೂ ಸಕ್ರಿಯಗೊಳಿಸಲಾಗುವುದು. ಆದ್ದರಿಂದ  ಇಂದಿನ ಮಹಿಳಾ ಸಮಿತಿಯು ಕೇವಲ ಸಾಂಕೇತಿಕ ಅಥವಾ ತಾತ್ಕಾಲಿಕವಾದ ಘಟಕ ಮಾತ್ರವಾಗಿದೆ ಮತ್ತು ನೂತನ ಸಮಿತಿಯ ರೂಪೀಕರಣದವರೆಗೆ ಪ್ರಸಕ್ತ ನೇಮಕಾತಿಯು, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಮಹಿಳಾ ಸಮಿತಿಯ ನೆಲೆಯಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

 ಇದೇವೇಳೆ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷೆಯಾಗಿ, ಆಯಿಶಾ ಮಮ್ತಾಝ್ , ಪ್ರಧಾನ ಕಾರ್ಯದರ್ಶಿಯಾಗಿ ಮರಿಯಂ ಶಹೀರ ಮತ್ತು ಜತೆ ಕಾರ್ಯದರ್ಶಿಗಳಾಗಿ ಝೀನತ್ ಹಾಗೂ ರಝಿಯಾ ವಾಮಂಜೂರು ಅವಿರೋಧವಾಗಿ ಆಯ್ಕೆಯಾದರು.

 ಸಭೆಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಉಪಾಧ್ಯಕ್ಷೆ ಮರಿಯಮ್ ಶಹೀರ  ಹಾಗೂ ಪಿ. ಆರ್. ಕಾರ್ಯದರ್ಶಿ ಮತ್ತು ಜಿಲ್ಲಾ ಮಾಧ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮುತ್ತಲಿಬ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News