ಐಸಿಎಸ್ ಇ 10ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದು

Update: 2021-04-20 05:22 GMT

ಹೊಸದಿಲ್ಲಿ: ಐಸಿಎಸ್ ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ  ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ಸ್ (ಸಿಐಎಸ್ ಸಿಇ)ಸೋಮವಾರ ಪ್ರಕಟಿಸಿದೆ.

12ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುವ ದಿನದಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಆಯ್ಕೆ ನೀಡಲಾಗುವುದು ಅಥವಾ ಪರೀಕ್ಷೆಗಳನ್ನು ಬರೆಯದೇ ಇರಬಹುದು ಎಂದು ಈ ಹಿಂದೆ ಮಂಡಳಿ ತಿಳಿಸಿತ್ತು. 

ಹಿಂದಿನ ಸುತ್ತೋಲೆಯ ಪ್ರಕಾರ 12ನೇ ತರಗತಿಯ ಮಂಡಳಿಯ ಪರೀಕ್ಷೆಗಳು ನಂತರದ ದಿನಾಂಕದಂದು  ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. 

ದೇಶದಲ್ಲಿ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಿಐಎಸ್‍ಸಿಇ , ಐಸಿಎಸ್ ಇ (10ನೇ ತರಗತಿ)2021 ಪರೀಕ್ಷೆಯನ್ನು ರದ್ದುಪಡಿಸಲು  ನಿರ್ಧರಿಸಿದೆ. ಎಪ್ರಿಲ್ 16ರ ಹಿಂದಿನ ಸುತ್ತೋಲೆಯಲ್ಲಿ ನೀಡಲಾದ ಆಯ್ಕೆಗಳನ್ನು ಈಗ ಹಿಂಪಡೆಯಲಾಗಿದೆ. ನಮ್ಮ ವಿದ್ಯಾರ್ಥಿಗಳು ಹಾಗೂ ಬೋಧನ ಅಧ್ಯಾಪಕರ ಸುರಕ್ಷತೆ ಹಾಗೂ ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆ ಹಾಗೂ ಪ್ರಮುಖ ಆಸಕ್ತಿಯಾಗಿದೆ ಎಂದು ಸಿಐಎಸ್‍ಸಿಇ ಸೋಮವಾರ ಹೊರಡಿಸಿದ ಸುತ್ತೊಲೆಯಲ್ಲಿ ತಿಳಿಸಿದೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News