ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಅರ್ಧಕ್ಕೆ ರದ್ದು

Update: 2021-04-20 10:55 GMT
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಸೋಮವಾರ ಹಗಲು ರಥೋತ್ಸವ ನಡೆಯಿತು.

ಮಂಗಳೂರು, ಎ.20: ಕೋವಿಡ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಆಚರಣೆಯನ್ನು ಅರ್ಧಕ್ಕೆ ರದ್ದುಗೊಳಿಸಲಾಗಿದೆ.

ಈ ಬಾರಿ ನಿರ್ಬಂಧಗಳ ನಡುವೆ ಸರಳವಾಗಿ ಜಾತ್ರೋತ್ಸವ ಆಚರಣೆಗೆ ನಿರ್ಧರಿಸಲಾಗಿತ್ತು. ಆದರೆ ಜನರು ಸ್ವಯಂ ಪ್ರೇರಿತರಾಗಿ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಸೋಮವಾರ ಮುಲ್ಕಿ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ದೇವಳಕ್ಕೆ ತೆರಳಿ ಸರಕಾರದ ಆದೇಶದ ಪ್ರಕಾರ ಜಾತ್ರೋತ್ಸವ ಆಚರಣೆ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.

ಸೋಮವಾರ ದೇವಳದ ಹಗಲು ರಥೋತ್ಸವ ನಡೆಸಲಾಗಿತ್ತು. ಮಂಗಳವಾರ ಕಟೀಲು ಅಮ್ಮನವರ ಎಕ್ಕಾರು ಭೇಟಿ ಹಾಗೂ ಶಿಬರೂರು ಕೊಡಮಣಿತ್ತಾಯ ಭೇಟಿ ರದ್ದುಗೊಳಿಸಲಾಗಿದೆ. ಜಾತ್ರೆಯ ಉಳಿದ ಕಾರ್ಯಕ್ರಮಗಳನ್ನು ಪ್ರಾಂಗಣದ ಒಳಗೆ ಸರಳವಾಗಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News