ಲಾಕ್ ಡೌನ್ ನಿಂದ ವೈರಸ್ ಕಡಿಮೆಯಾಗುತ್ತದೆ ಎನ್ನಲು ಪುರಾವೆ ಇಲ್ಲ ಎಂದ ಗುಜರಾತ್ ಉಪಮುಖ್ಯಮಂತ್ರಿ

Update: 2021-04-20 06:32 GMT

ಹೊಸದಿಲ್ಲಿ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಲಾಕ್ ಡೌನ್ ಅಥವಾ ನೈಟ್ ಕಫ್ರ್ಯೂ ಹೇರುವ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಎಲ್ಲ ಶಾಲೆಗಳನ್ನು ಎರಡು ತಿಂಗಳವರೆಗೆ ಮುಚ್ಚಲಾಗುವುದು. ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಬೇಸಿಗೆ ರಜೆಗಳನ್ನು ಘೋಷಿಸಲಾಗುವುದು ಎಂದು ಘೋಷಿಸಿದ್ದಾರೆ. 

ಮತ್ತೊಂದಡೆ ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಲಾಕ್ ಡೌನ್ ಖಂಡಿತವಾಗಿಯೂ ಕೊರೋನ ವೈರಸ್ ಹರಡುವುದನ್ನು ತಡೆಯುತ್ತದೆ ಎಂದು ಸೂಚಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಟೇಲ್, ಹಲವಾರು ರಾಜ್ಯಗಳು, ದೇಶಗಳು ಲಾಕ್ ಡೌನ್ ಘೋಷಿಸಿದ ಹೊರತಾಗಿಯೂ ಕೋವಿಡ್-19 ಪ್ರಕರಣಗಳು ವಿಪರೀತ ಹೆಚ್ಚಾಗಿವೆ. ಕೊರೋನದ ಮೊದಲ ಅಲೆಯಲ್ಲಿ ಲಾಕ್ ಡೌನ್‍ನಿಂದ ನಾವು ಕೊರೋನ ಹರಡುವಿಕೆಯ ಸರಪಳಿಯನ್ನು ತುಂಡರಿಸಿದ್ದೆವು. ಆದರೆ, ಕೊರೋನ ಎರಡನೇ ಅಲೆ ಅತ್ಯಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದರು.

ನಾವು ರಾತ್ರಿ ಕಫ್ರ್ಯೂ ಮುಂದುವರಿಸಿದ್ದೇವೆ. ಏಕೆಂದರೆ ಬಹಳಷ್ಟು ಜನರು ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಪಾನ್ ಸ್ಟಾಲ್ ಗಳಿಗೆ ಹೋಗುತ್ತಾರೆ. ತಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿರುತ್ತಾರೆ….ಇದರಿಂದ ಸೋಂಕು ಹರಡುವ ಸಾಧ್ಯತೆ ಅಧಿಕವಿದೆ. . ಯಾವುದೆ ರಾಜ್ಯ ಸಂಪೂರ್ಣ ಲಾಕ್ ಡೌನ್ ಮಾಡಲಾರದು ಎಂದು ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News