ಅಡ್ಯಾರ್ ಕಣ್ಣೂರು: ಶೈಖ್ ಯೂಸುಫ್ ಸಿದ್ದೀಖ್ ಮಹಿಳಾ ಶರೀಅತ್ ಕಾಲೇಜಿನಲ್ಲಿ ಸಮಸ್ತ ಫಾಳಿಲ ಕೋರ್ಸ್ ಉದ್ಘಾಟನೆ

Update: 2021-04-20 06:36 GMT

ಮಂಗಳೂರು, ಎ.20: ಅಡ್ಯಾರ್ ಕಣ್ಣೂರಿನ ಶೈಖ್ ಯೂಸುಫ್ ಸಿದ್ದೀಖ್ ಮಹಿಳಾ ಶರೀಅತ್ ಕಾಲೇಜಿನಲ್ಲಿ 2ನೇ ವರ್ಷದ ಸಮಸ್ತ ಫಾಳಿಲ ಆಲಿಮಾ ಕೋರ್ಸಿನ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಶರೀಅತ್ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿನ ನಿರ್ದೇಶಕ ಅನ್ಸಾರ್ ಫೈಝಿಯವರು ಸಮಸ್ತ ಫಾಳಿಲ ಕೋರ್ಸ್ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಮುಸ್ತಫ ಅನ್ಸಾರಿ ಅಧ್ಯಕ್ಷತೆ ವಹಿಸಿದ್ದರು.

21-2022ನೇ ಸಾಲಿನ ಪಿಯುಸಿ ವಾಣಿಜ್ಯ ಮತ್ತು ಕಲಾ ವಿಭಾಗ ಮತ್ತು ಆಲಿಮಾ ಕೋರ್ಸಿನ ಫಾಳಿಲ ಸಿದ್ದೀಖಿಯಾ ಇದರ ದಾಖಲಾತಿ ಫಾರ್ಮನ್ನು ಅಡ್ಯಾರ್ ಕಣ್ಣೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಸ್.ಹಮೀದ್ ಹಾಜಿ ಬಿಡುಗಡೆಗೊಳಿಸಿದರು.

ಕಾಲೇಜಿನ ಸಂಚಾಲಕ ಹಮೀದ್ ಟ್ಯಾಲೆಂಟ್ ಸ್ವಾಗತಿಸಿದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮದ್, ಡಿ.ಎಂ.ಮುಹಮ್ಮದ್ ಹಾಜಿ ಹಾಗೂ ಪ್ರಾಧ್ಯಾಪಕ ಫಳ್‌ಲ್ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಪ್ರಾಧ್ಯಾಪಕಿಯರಾದ ಫಾತಿಮಾ ಆಫ, ಹರ್ಷಿದ ಮತ್ತು ಫರ್ಝಾನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News