ದಯವಿಟ್ಟು ಮತದಾನದ ವೇಳಾಪಟ್ಟಿ ಮೊಟಕುಗೊಳಿಸಿ: ಚುನಾವಣಾ ಆಯೋಗಕ್ಕೆ ಮಮತಾ ಮತ್ತೊಮ್ಮೆ ವಿನಂತಿ

Update: 2021-04-20 07:17 GMT

ಚಾಕುಲಿಯಾ: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಪಶ್ಚಿಮಬಂಗಾಳದ ಕೊನೆಯ ಮೂರು ಹಂತದ ಮತದಾನಗಳನ್ನು ಒಂದೇ ದಿನದಲ್ಲಿ ಅಥವಾ ಎರಡು ದಿನಗಳಲ್ಲಿ ನಡೆಸಬೇಕು. ತನ್ನ ಮೂಲವೇಳಾಪಟ್ಟಿಗೆ ಅಂಟಿಕೊಳ್ಳದೇ ತನ್ನ ನಿರ್ಧಾರವನ್ನು ಮರು ಪರಿಶೀಲನೆ ನಡೆಸಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಚುನಾವಣಾ ಆಯೋಗವನ್ನು ವಿನಂತಿಸಿದ್ದಾರೆ.

ಬಿಜೆಪಿಯ ಆದೇಶದ ಮೇರೆಗೆ ಉಳಿದ 3 ಹಂತಗಳ ಮತದಾನವನ್ನು ಒಟ್ಟಿಗೆ ನಡೆಸದೇ ಇರುವುದಕ್ಕೆ ಚುನಾವಣಾ ಆಯೋಗ ನಿರ್ಧರಿಸಿರಬಹುದು. ಆದರೆ ಚುನಾವಣಾ ಆಯೋಗವು ಸಾರ್ವಜನಿಕರ ಆರೋಗ್ಯಕ್ಕೆ ಆದ್ಯತೆ ನೀಡಬೇಕು   ಎಂದು ಉತ್ತರ ದಿನಾಜ್ ಪುರದಲ್ಲಿ ಸೋಮವಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.

ಮುಂದಿನ ಮೂರು ಹಂತಗಳ ಮತದಾನವನ್ನು ಒಂದೇ ದಿನ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಾನು ಕೈಮುಗಿದು ಬೇಡಿಕೊಳ್ಳುವೆ. ಒಂದೇ ದಿನ ಸಾಧ್ಯವಾಗದಿದ್ದರೆ ಎರಡು ದಿನಗಳ ಕಾಲ ನಡೆಸಲಿ. ದಯವಿಟ್ಟು ಬಿಜೆಪಿ ಏನು ಹೇಳುತ್ತದೆ ಎನ್ನುವುದನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಡಿ. ..ದಯವಿಟ್ಟು ಮತದಾನದ ವೇಳಾಪಟ್ಟಿಯನ್ನು ಮೊಟಕುಗೊಳಿಸಿ ಸಾರ್ವಜನಿಕರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದರು.

ನಾನು ಹಾಗೂ ನನ್ನ ಪಕ್ಷದ ನಾಯಕರು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಯಾವುದೇ ರ್ಯಾಲಿಗಳನ್ನು ನಡೆಸುವುದಿಲ್ಲ ಎಂದು ಮಮತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News