ರಾಜ್ಯಗಳಿಂದ ಶೇ23ರಷ್ಟು ಕೋವಿಡ್ ಲಸಿಕೆ ಪೋಲು; ತಮಿಳುನಾಡಿನಲ್ಲಿ ಗರಿಷ್ಠ

Update: 2021-04-20 08:02 GMT

ಹೊಸದಿಲ್ಲಿ: ಹಲವು ರಾಜ್ಯಗಳು ಕೋವಿಡ್ ಲಸಿಕೆ ಕೊರತೆ ಎದುರಿಸುತ್ತಿರುವ ನಡುವೆಯೇ ಆರ್‍ಟಿಐ ಮಾಹಿತಿಯೊಂದು ಕುತೂಹಲಕಾರಿ ವಿವರಗಳನ್ನು ನೀಡಿದೆ.  ರಾಜ್ಯಗಳಿಗೆ  ಒದಗಿಸಲಾದ ಒಟ್ಟು ಲಸಿಕೆಗಳ ಪೈಕಿ ಶೇ23ರಷ್ಟು ಲಸಿಕೆಗಳು ಎಪ್ರಿಲ್ 11ರ ತನಕ ಪೋಲಾಗಿವೆ ಎಂದು ತಿಳಿದು ಬಂದಿದೆ.

ತಮಿಳುನಾಡಿನಲ್ಲಿ ಗರಿಷ್ಠ ಶೇ12.10ರಷ್ಟು ಲಸಿಕೆ ಪೋಲಾಗಿದ್ದು ಹರ್ಯಾಣದಲ್ಲಿ ಶೇ9.74, ಪಂಜಾಬ್ ರಾಜ್ಯದಲ್ಲಿ ಶೇ 8.12, ಮಣಿಪುರದಲ್ಲಿ ಶೇ 7.8 ಹಾಗೂ ತೆಲಂಗಾಣದಲ್ಲಿ ಶೇ7.55ರಷ್ಟು ಲಸಿಕೆ ಪೋಲಾಗಿದೆ.

ಎಪ್ರಿಲ್ 11ರ ತನಕ ರಾಜ್ಯಗಳು ಬಳಸಿದ್ದ 10 ಕೋಟಿ ಡೋಸ್‍ಗಳ ಪೈಕಿ 44 ಲಕ್ಷಕ್ಕೂ ಅಧಿಕ ಡೋಸ್‍ಗಳು ಪೋಲಾಗಿವೆ.

ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಗೋವಾ, ದಾಮನ್ ಮತ್ತು ದಿಯು, ಅಂಡಮಾನ್ ಮತ್ತು ನಿಕೋಬಾರ್   ಮತ್ತು ಲಕ್ಷದ್ವೀಪದಲ್ಲಿ ಲಸಿಕೆಗಳ ಪೋಲು ಕನಿಷ್ಠ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News