ಪುತ್ತೂರು ಕಮ್ಯೂನಿಟಿ ಸೆಂಟರ್ ನ ನೂತನ ಕಚೇರಿ ಮತ್ತು ಕೌನ್ಸಿಲಿಂಗ್ ಸೆಂಟರ್ ಉದ್ಘಾಟನೆ

Update: 2021-04-20 09:39 GMT

ಪುತ್ತೂರು, ಎ.20: ಪುತ್ತೂರು ತಾಲೂಕು ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ-ಮಾರ್ಗದರ್ಶನ ನೀಡುವ ಪುತ್ತೂರು ಕಮ್ಯೂನಿಟಿ ಸೆಂಟರ್ ಅನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ವೃತ್ತಿ ಬದುಕಿಗೂ ಉತ್ತಮ ಮಾರ್ಗದರ್ಶನ ಅತ್ಯಗತ್ಯ. ಈ ನಿಟ್ಟಿನಲ್ಲಿ ಆರಂಭಗೊಂಡಿರುವ ಕಮ್ಯೂನಿಟಿ ಸೆಂಟರ್ ತಾಲೂಕಿನ ಬೇಡಿಕೆಯನ್ನು ಪೂರೈಸಲಿದೆ ಎಂದರೆ ತಪ್ಪಾಗಲಾರದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮೂಹಕ್ಕೆ ಆತ್ಮೀಯ ಸಲಹೆ ನೀಡುವ ಕೌನ್ಸಿಲಿಂಗ್ ಸೆಂಟರನ್ನು ಪುತ್ತೂರು ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹಾಜಿ ಉದ್ಘಾಟಿಸಿದರು.

ರೋಟರಿ ಪುತ್ತೂರು ಇದರ ಅಧ್ಯಕ್ಷ ಕ್ಸೇವಿಯರ್ ಡಿಸೋಜ ಮಾತನಾಡಿ ಶುಭ ಹಾರೈಸಿದರು. ಕಮ್ಯೂನಿಟಿ ಸೆಂಟರ್ ನ ಯೋಜನೆಯನ್ನು ರಫೀಕ್ ರೋಯಲ್ ವಿವರಿಸಿದರು.

ಇದೇವೇಳೆ ಕಮ್ಯೂನಿಟಿ ಸೆಂಟರ್ ಮೂಲಕ ಬೋರ್ಡ್ ಹೈಸ್ಕೂಲ್ ನ ವಿದ್ಯಾರ್ಥಿಗಳಿಗೆ ಸ್ಪೋರ್ಟ್ ವಸ್ತ್ರಗಳಿಗಾಗಿ ನಗದನ್ನು ಸೆಂಟರ್ ನ ಮುಖ್ಯಸ್ಥ ಹನೀಫ್ ಪುತ್ತೂರು ಅವರು ಶಾಸಕರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಣಾಧಿಕಾರಿ ಲೊಕೇಶ್, ಕೆಡಿಪಿ ಅಧ್ಯಕ್ಷ ಅಬ್ದುಲ್ಲ ಕುಂಞಿ, ರೈತ ಮೋರ್ಚಾದ ಅಧ್ಯಕ್ಷ ಸುರೇಶ್ ಕನ್ನರಾಯ ಭಾಗವಹಿಸಿದ್ದರು.

ಕೆರಿಯರ್ ಗೈಡೆನ್ಸ್, ಅಸೆಸ್ ಮೆಂಟ್, ಸ್ಟಡಿ ಸ್ಕಿಲ್, ಮೋಟಿವೇಶನ್, ಪೇರೆಂಟಿಂಗ್, ಸಪೂರ್ಟಿವ್ ಸಿಸ್ಟಂ, ಸ್ಕಾಲರ್ ಶಿಪ್, ಗೋಲ್ ಸೆಟ್ಟ್ ಪ್ರೋಗ್ರಾಂಗಳನ್ನು ಹೊಂದಿರುವ ಕಮ್ಯೂನಿಟಿ ಸೆಂಟರ್ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಕೂಡ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News