ಬಂಡುಕೋರರೊಂದಿಗಿನ ಘರ್ಷಣೆಯಲ್ಲಿ ಚಾಡ್‌ ದೇಶದ ಅಧ್ಯಕ್ಷ ಮೃತ್ಯು

Update: 2021-04-20 11:40 GMT

ಆಫ್ರಿಕಾ: ಕೇಂದ್ರ ಆಫ್ರಿಕಾದಲ್ಲಿರುವ ಚಾಡ್‌ ದೇಶದ ಅಧ್ಯಕ್ಷ ಇದ್ರೀಸ್‌ ಡೆಬಿ ಉತ್ತರದ ಬಂಡುಕೋರರೊಂದಿಗಿನ ಘರ್ಷಣೆಯಲ್ಲು ಪ್ರಾಣ ಕಳೆದುಕೊಂಡಿದ್ದಾರೆಂದು bbc ವರದಿ ಮಾಡಿದೆ. ಈ ಕುರಿತಾದಂತೆ ಚಾಡ್‌ ದೇಶದ ಸೇನೆಯು ತಮ್ಮ ಅಧಿಕೃತ ಟಿವಿ ವಾಹಿನಿಯಲ್ಲಿ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.

ಚುನಾವಣಾ ಫಲಿತಾಂಶವು ಪ್ರಕಟವಾದರೆ ಇದ್ರೀಸ್‌ 80% ಮತಗಳೊಂದಿಗೆ ಜಯಗಳಿಸಲಿದ್ದಾರೆ ಮತ್ತು ಆರನೇ ಬಾರಿ ಅಧಿಕಾರಕ್ಕೇರಲಿದ್ದಾರೆಂಬ ಘೋಷಣೆಯ ಬಳಿಕ ಘರ್ಷಣೆ ನಡೆದು ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸರಕಾರ ಮತ್ತು ಸಂಸತ್ತನ್ನು ವಿಸರ್ಜಿಸಲಾಗಿದ್ದು, ಸೇನೆಯು ಮುಂದಿನ 18 ತಿಂಗಳುಗಳ ಕಾಲ ಆಡಳಿತ ನಡೆಸಲಿದೆ.

1990ರಲ್ಲಿ ಇದ್ರೀಸ್‌ ಡೆಬಿ ಅಧಿಕಾರಕ್ಕೇರಿದ್ದರು. ಲಿಬಿಯಾದ ಗಡಿಯಲ್ಲಿ ಬಂಡುಕೋರರೊಂದಿಗೆ ಹೋರಾಟ ನಡೆಸುವ ಸೈನಿಕರನ್ನು ಇದ್ರೀಸ್‌ ವಾರಾಂತ್ಯದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News