ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ ಬಳಿಕ ತೆಲಂಗಾಣ ಮುಖ್ಯಮಂತ್ರಿಗೆ ಕೋವಿಡ್‌ ಪಾಸಿಟಿವ್‌

Update: 2021-04-20 13:27 GMT

ಹೈದರಾಬಾದ್:‌ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ರವರಿಗೆ ಕೊರೋನ ಸೋಂಕು ದೃಢವಾದ ಬಳಿಕ ತೆಲಂಗಾಣದಾದ್ಯಂತ ಎಪ್ರಿಲ್‌ 30 ರವರೆಗೆ ನೈಟ್‌ ಕರ್ಫ್ಯೂ ಜಾರಿ ಮಾಡಲು ಆದೇಶ ಹೊರಡಿಸಲಾಗಿದೆ. ನಾಗಾರ್ಜುನಸಾಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮುನ್ನಾದಿನ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ ಬಳಿಕ ಅವರಲ್ಲಿ ಕೊರೋನ ಸೋಂಕು ಕಂಡು ಬಂದಿತ್ತು ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಮಾತ್ರವಲ್ಲದೇ ಸಭೆಯಲ್ಲಿ ಭಾಗವಹಿಸಿದ್ದ ೬೦ ಮಂದಿಯಲ್ಲಿ ಕೊರೋನ ಪಾಸಿಟಿವ್‌ ಕಂಡು ಬಂದಿದೆ. ಸೋಂಕಿಗೆ ಒಳಗಾದವರಲ್ಲಿ ಆಡಳಿತಾರೂ ತೆಲಂಗಾಣ ರಾಷ್ಟ್ರ ಸಮಿತಿಯ ಅಭ್ಯರ್ಥಿ ನೋಮುಲಾ ಭಗತ್ ಮತ್ತು ಅವರ ಕುಟುಂಬ ಮತ್ತು ಹಲವಾರು ರಾಜಕೀಯ ಮುಖಂಡರು ಸೇರಿದ್ದಾರೆ.

ಏಪ್ರಿಲ್ 17 ರಂದು ನಡೆದ ಉಪಚುನಾವಣೆಗೆ ಮುನ್ನ ಏಪ್ರಿಲ್ 14 ರಂದು ಹಾಲಿಯಾದಲ್ಲಿ ಮುಖ್ಯಮಂತ್ರಿ ಭಾಷಣ ಮಾಡಿದ ಸಭೆಯಲ್ಲಿ ಅಂದಾಜು 1 ಲಕ್ಷ ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಕೋವಿಡ್‌ ನ ಸಣ್ಣ ಲಕ್ಷಣಗಳು ಕಾಣಿಸಲಾರಂಭಿಸಿದಾಗ ಪರೀಕ್ಷೆಗೆ ಒಳಗಾಗಿದ್ದು, ಈ ವೇಳೆ ಪಾಸಿಟಿವ್‌ ವರದಿ ಬಂದಿದೆ. ಸ್ವಯಂ ಐಸೋಲೇಶನ್‌ ಗೆ ಒಳಗಾಗಲು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News