ವೆನ್‌ಲಾಕ್‌ನಲ್ಲಿ ಕೋವಿಶೀಲ್ಡ್ ಲಸಿಕೆ ಖಾಲಿ

Update: 2021-04-20 12:55 GMT

ಮಂಗಳೂರು, ಎ.20: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ನೀಡಲಾಗುವ ಕೋವಿಶೀಲ್ಡ್ ಲಸಿಕೆ ಸಂಗ್ರಹ (ಸ್ಟಾಕ್) ದ.ಕ. ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್‌ನಲ್ಲಿ ಇಂದು ಖಾಲಿಯಾಗಿದ್ದು, ಲಸಿಕೆ ಹಾಕಿಸಲು ಬಂದಿದ್ದ ಸುಮಾರು 40ಕ್ಕೂ ಅಧಿಕ ಮಂದಿ ವಾಪಾಸಾದ ಘಟನೆ ನಡೆಯಿತು.

ಈ ಬಗ್ಗೆ ವಾರ್ತಾಭಾರತಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರನ್ನು ಸಂಪರ್ಕಿಸಿದಾಗ, ‘‘ಇಂದು ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಖಾಲಿಯಾಗಿದ್ದು ಹೌದು. ನಾನು ಹೋಗಿ ತಪಾಸಣೆ ನಡೆಸಿದ್ದೇನೆ. ದ್ವಿತೀಯ ಹಂತದ ಕೋವಿಶೀಲ್ಡ್ ಲಸಿಕೆ ಪಡೆಯಲು ಬಂದಿದ್ದ ಕೆಲವರು ಹಿಂತಿರುಗಿದ್ದಾರೆ. ಇಡೀ ರಾಜ್ಯದಲ್ಲಿ ಇದೀಗ ಕೇಂದ್ರ ಸರಕಾರದಿಂದ ಲಸಿಕೆ ಪೂರೈಕೆ ಆಗಿದೆ. ಇಂದು ರಾತ್ರಿ ಬೆಂಗಳೂರಿಗೆ ಕೋವಿಶೀಲ್ಡ್ ಲಸಿಕೆ ತಲುಪಲಿದ್ದು, ಅಲ್ಲಿಂದ ಲಸಿಕೆ ತರಲು ನಮ್ಮ ವಾಹನ ಕೂಡಾ ತೆರಳಿದ್ದು, ಬೆಳಗ್ಗೆ ವಾಹನ ಮಂಗಳೂರಿಗೆ ವಾಪಾಸಾಗಲಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News