ಅಂಬೇಡ್ಕರ್ ಜನ್ಮ ದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

Update: 2021-04-20 15:44 GMT

ಉಡುಪಿ, ಎ.20: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೆ ಜನ್ಮ ದಿನಾಚರಣೆ ಪ್ರಯುಕ್ತ ಕೆಮ್ಮಣ್ಣು ಗ್ರಾಪಂ ವತಿಯಿಂದ ಸ್ವಚ್ಛತಾ ಕಾರ್ಯ ಮತ್ತು ಭಾರತ ಭಾಗ್ಯವಿಧಾತ ಚಿತ್ರ ಪ್ರದರ್ಶನ ವನ್ನು ಎ.14ರಂದು ಹಮ್ಮಿಕೊಳ್ಳಲಾಗಿತ್ತು.

ಕಚೇರಿಯಲ್ಲಿ ಗ್ರಾಪಂ ಅಧ್ಯಕ್ಷೆ ಲತಾ, ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಸದಸ್ಯರುಗಳಾದ ಆಶಾ, ಕುಸುಮ ಮತ್ತು ಮಹಮ್ಮದ್ ಇದ್ರೀಸ್, ಸಂವಿಧಾನದ ಮಹತ್ವ ಮತ್ತು ಅಂಬೇಡ್ಕರ್ ಕುರಿತು ಮಾತನಾಡಿದರು.

ಗ್ರಾಪಂ ಸದಸ್ಯರುಗಳಾದ ವಿಜಯ, ಪ್ರಶಾಂತ್ ಕೆಮ್ಮಣ್ಣು, ಪುರಂದರ ಟಿ. ಕುಂದರ್, ಯಶೋದಾ, ವತ್ಸಲ ವಿನೋದ್, ಮುಮ್ತಾಜ್, ಮಾಜಿ ಉಪಾಧ್ಯಕ್ಷ ಉಸ್ತಾದ್ ಸಾದಿಕ್, ಗ್ರಾಪಂ ಸಿಬ್ಬಂದಿಗಳಾದ ಶಾಂತ, ಪೂರ್ಣಿಮಾ, ದೀಕ್ಷಿತಾ, ಸಂತೋಷ್ ಉಪಸ್ಥಿತರಿದ್ದರು.

ಬಳಿಕ ವಾರ್ತಾ ಇಲಾಖೆಯಿಂದ ತಯಾರಿಸಲಾಗಿದ್ದ ಅಂಬೇಡ್ಕರ್ ಅವರ ಸಾಧನೆಯನ್ನು ಪ್ರತಿಬಿಂಬಿಸುವ ಭಾರತ ಭಾಗ್ಯವಿಧಾತ ಸಂಗೀತ ನೃತ್ಯ ರೂಪಕದ ಯೂಟ್ಯೂಬ್ ಆವೃತ್ತಿಯ ಪ್ರದರ್ಶನವನ್ನು ತೋರಿಸಲಾಯಿತು.

ಅದಕ್ಕೂ ಮೊದಲು ಸೀ ಸ್ಟಾರ್ ಫ್ರೆಂಡ್ಸ್ ಕೆಮ್ಮಣ್ಣು ಸಂಘಟನೆಯ ಜೊತೆ ಗೂಡಿ ಕೆಮ್ಮಣ್ಣು ಕಂಬಳಪರಿ ರಸ್ತೆಯ ಪಕ್ಕದಲ್ಲಿ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸಂಘಟನೆಯ ಮುಖ್ಯಸ್ಥ ರವಿರಾಜ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಅಲ್ಲಿಂದ ಜ್ಯೂನಿಯರ್ ಕಾಲೇಜು ರಸ್ತೆಯ ವರೆಗೆ ಸ್ವಚ್ಛತೆಯ ಕಡೆಗೆ ಒಂದಿಷ್ಟು ನಡಿಗೆ ಘೋಷಾ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸ್ವಚ್ಛತಾ ನಡಿಗೆಯ ನೇತೃತ್ವವನ್ನು ಸಂಘಟನೆಯ ನಾಯಕ ಹಾಗೂ ಗ್ರಾಪಂ ಸದಸ್ಯ ಅರುಣ್ ಫೆರ್ನಾಂಡೀಸ್ ವಹಿಸಿದ್ದರು. ಸಂಘಟನೆಯ ಸತೀಶ್ ಶೆಟ್ಟಿ ಕಂಡಾಳ, ಪ್ರವೀಣ್ ಕುಮಾರ್, ಕುಶಾಲ್ ಕರ್ಕೇರಾ, ಸತೀಶ್ ಮತ್ತಿತರರು ಸಹಕರಿಸಿದರು. ಪಂಚಾಯತ್ ಕಾರ್ಯದರ್ಶಿ ದಿನಕರ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News