ಚೀನಾ ಪತ್ರಕರ್ತರ ಅತಿ ದೊಡ್ಡ ಬಂದೀಖಾನೆ: ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್

Update: 2021-04-20 17:54 GMT

ಪ್ಯಾರಿಸ್ (ಫ್ರಾನ್ಸ್), ಎ. 20: ಚೀನಾವು ಜಗತ್ತಿನಲ್ಲೇ ಪತ್ರಕರ್ತರ ಅತಿ ದೊಡ್ಡ ಬಂದೀಖಾನೆಯಾಗಿದೆ ಎಂದು ಜಾಗತಿಕ ಪತ್ರಕರ್ತರ ಸಂಘಟನೆ ‘ರಿಪೋಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ. ಇಂಟರ್‌ನೆಟ್ ಸೆನ್ಸರ್‌ಶಿಪ್, ಕಣ್ಗಾವಲು ಮತ್ತು ಸುಳ್ಳುಪ್ರಚಾರವನ್ನು ಚೀನಾ ಈಗಲೂ ಮುಂದುವರಿಸುತ್ತಿದೆ ಎಂದು ಅದು ಹೇಳಿದೆ.

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಜಗತ್ತಿನಾದ್ಯಂತ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯದಲ್ಲೂ ಹೆಚ್ಚಳವಾಗಿದೆ ಎಂದು ಅದು ಮಂಗಳವಾರ ಬಿಡುಗಡೆ ಮಾಡಿದ ತನ್ನ ವಾರ್ಷಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಹೇಳಿದೆ.

180 ದೇಶಗಳು ಮತ್ತು ಭೂಭಾಗಗಳಲ್ಲಿನ ಪತ್ರಿಕಾ ಸ್ವಾತಂತ್ರ್ಯ ಪರಿಸ್ಥಿತಿಯನ್ನು ಸೂಚ್ಯಂಕವು ಪರಿಶೀಲಿಸಿದೆ. ಈ ಪೈಕಿ ಸುಮಾರು ಮುಕ್ಕಾಲು ಭಾಗದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಅಥವಾ ಅದಕ್ಕೆ ಗಂಭೀರ ರೀತಿಯಲ್ಲಿ ತಡೆಯೊಡ್ಡಲಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News