​ದ.ಕ.ಜಿಲ್ಲೆಯಲ್ಲಿ ಮತ್ತೆ ನಾಲ್ಕು ಕಂಟೈನ್ಮೆಂಟ್ ವಲಯ ಘೋಷಣೆ

Update: 2021-04-20 17:58 GMT

ಮಂಗಳೂರು, ಎ.20: ದ.ಕ.ಜಿಲ್ಲೆಯಲ್ಲಿ ಮಂಗಳವಾರ ನಾಲ್ಕು ಕಂಟೈನ್ಮೆಂಟ್ ವಲಯಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಘೋಷಿಸಿದೆ. ಮಂಗಳೂರು ತಾಲೂಕಿನಲ್ಲಿ ಮೂರು ಹಾಗೂ ಕಡಬ ತಾಲೂಕಿನಲ್ಲಿ ಒಂದು ಕಂಟೈನ್ಮೆಂಟ್ ವಲಯವನ್ನು ಗುರುತಿಸಲಾಗಿದೆ.

ಮುಲ್ಕಿ-ಕಟೀಲು ಸಮೀಪದ ಮನ್ನೆಬೆಟ್ಟುವಿನ ಒಂದು ಅಪಾರ್ಟ್‌ಮೆಂಟ್‌ನಲ್ಲಿ 5 ಪಾಸಿಟಿವ್ ಪ್ರಕರಣ ಮತ್ತು ನಗರದ ಪಾಂಡೇಶ್ವರದ ಕ್ವಾಟ್ರರ್ಸ್‌ನಲ್ಲಿ 8 ಪಾಸಿಟಿವ್ ಪ್ರಕರಣ, ಕಡಬ ತಾಲೂಕಿನ ಒಂದು ಮನೆಯಲ್ಲಿ 5 ಪಾಸಿಟಿವ್ ಪ್ರಕರಣ ಹಾಗೂ ನಗರದ ಕಂಕನಾಡಿಯ ಕಾನ್ವೆಂಟ್‌ವೊಂದರಲ್ಲಿ 11 ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡ ಬಳಿಕ ಕಂಟೈನ್‌ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.

ಮೃತದೇಹಕ್ಕೆ ನೋಡಲ್ ಅಧಿಕಾರಿ: ಕೋವಿಡ್ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬದ ಸದಸ್ಯರಿಂದ ಹೆಚ್ಚುವರಿ ಹಣ ಪಡೆದು ಅಂತ್ಯಕ್ರಿಯೆ ನಡೆಸುವ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ದೂರು ಬಂದ ಹಿನ್ನೆಲೆಯಲ್ಲಿ ಕೋವಿಡ್ ರೋಗಿಯ ಅಂತ್ಯಕ್ರಿಯೆಯನ್ನು ನಗರದ ಅತ್ತಾವರದ ನಂದಿಗುಡ್ಡೆ ಹಾಗೂ ಬೋಳೂರು ಸಶ್ಮಾನ ಭೂಮಿಯಲ್ಲಿ ಸರಕಾರದ ವತಿಯಿಂದ ಉಚಿತವಾಗಿ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

7032 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಮಂಗಳವಾರ 60 ವರ್ಷ ಮೇಲ್ಪಟ್ಟ 2,012 ಮಂದಿ ಮೊದಲನೇ ಡೋಸ್, 980 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 133 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 141 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 109 ಫ್ರಂಟ್‌ಲೈನ್ ವರ್ಕರ್ಸ್‌ ಮೊದಲನೇ ಡೋಸ್, 61 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45ರಿಂದ 60 ವರ್ಷದೊಳಗಿನ 3,272ಮಂದಿ ಮೊದಲನೇ ಡೋಸ್, 324 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News