​ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಕೆ.ಸಿ.ರೋಡ್ ಉಸ್ತಾದ್ ಕರೆ

Update: 2021-04-20 18:01 GMT

ಕೋಟೆಕಾರ್, ಎ.20: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಮಸೀದಿಗೆ ನಮಾಝ್ ನಿರ್ವಹಿಸಲು ಬರುವವರು ಮನೆಯಲ್ಲೇ ಅಂಗಶುದ್ಧಿ ಮಾಡಬೇಕು. ವಯಸ್ಸಾದವರು ಸಣ್ಣ ಮಕ್ಕಳು ಮನೆಯಲ್ಲೇ ನಮಾಝ್ ನಿರ್ವಹಿಸಬೇಕು. ನಮಾಝ್ನಲ್ಲಿ ಸುರಕ್ಷಿತ ಅಂತರ ಪಾಲಿಸವೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಸರಕಾರದ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಅಲ್‌ಹಾಜ್ ಹುಸೈನ್ ಸಅದಿ ಕೆ.ಸಿ.ರೋಡ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News