ಬ್ರಹ್ಮಾವರ ಯೋಜನಾ ಪ್ರಾಧಿಕಾರ ರದ್ಧತಿಗೆ ನಿರ್ಣಯ

Update: 2021-04-20 18:05 GMT

ಬ್ರಹ್ಮಾವರ, ಎ.20: ಬ್ರಹ್ಮಾವರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಯಾವುದೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಇಲ್ಲದಿರುವುದರಿಂದ ಬ್ರಹ್ಮಾವರ ಯೋಜನಾ ಪ್ರಾಧಿಕಾರವನ್ನು ರದ್ದು ಪಡಿಸುವ ನಿರ್ಣಯವನ್ನು ಇಂದು ನಡೆದ ಬ್ರಹ್ಮಾವರ ಯೋಜನಾ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಪ್ರಾಧಿಕಾರದ ವ್ಯಾಪ್ತಿಗೆ ಹಾರಾಡಿ, ಹಂದಾಡಿ, ವಾರಂಬಳ್ಳಿ, ಚಾಂತಾರು ಒಟ್ಟು ನಾಲ್ಕು ಪಂಚಾಯತ್ಗಳು ಒಳಪಟ್ಟಿದ್ದು, ಈ ಗ್ರಾಪಂಗಳನ್ನು ಸೇರಿಸಿ ಪುರಸಭೆಯಾಗಿ ಘೋಷಿಸುವ ಪ್ರಕ್ರಿಯೆಯೂ ಪ್ರಸ್ತುತ ಸ್ಥಗಿತಗೊಂಡಿರುವುದ ರಿಂದ ಬ್ರಹ್ಮಾವರ ಯೋಜನಾ ಪ್ರಾಧಿಕಾರವನ್ನು ರದ್ದು ಪಡಿಸಲು ನಿರ್ಣಯಿಸಿ ಪ್ರಸ್ತಾವನೆಯನ್ನು ಸರಕಾಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ನಾಳೆಯಿಂದ ಒಂದು ಎಕರೆ ಒಳಗಿನ ಭೂ ಪರಿವರ್ತನೆ ಕಡತ ಹಾಗೂ ಯೋಜನಾ ಪ್ರಾಧಿಕಾರದಲ್ಲಿ ಮಂಡಿಸಲಾಗುತ್ತಿದ್ದ ಇತರ ಕಡತಗಳನ್ನು ಪಂಚಾಯತ್ಗಳಲ್ಲಿ ಮಂಡಿಸಿ ವಿಲೇವಾರಿ ಮಾಡುವಂತೆ ಶಾಸಕ ಕೆ.ರಘುಪತಿ ಭಟ್ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಚಾಂತಾರು ಗ್ರಾಪಂ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಹಂದಾಡಿ ಗ್ರಾಪಂ ಅಧ್ಯಕ್ಷ ಉದಯ ಪೂಜಾರಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷೆ ಗುಲಾಬಿ, ಹಾರಾಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಮತ್ತು ನಗರ ಯೋಜನಾ ಸದಸ್ಯರಾದ ಜಿತೇಶ್, ಚಾಂತಾರು, ಹಂದಾಡಿ, ವಾರಂಬಳ್ಳಿ, ಹಾರಾಡಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News