ಕೊಡವೂರು ಮಸೀದಿಯ ಆಸ್ತಿ ರಕ್ಷಣೆಗೆ ಆಗ್ರಹ

Update: 2021-04-20 18:08 GMT

ಉಡುಪಿ, ಎ.20: ಕೊಡವೂರಿನಲ್ಲಿರುವ ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಕಲ್ಮತ್ ಮಸೀದಿಯನ್ನು ಅನಧಿಕೃತ ಕಟ್ಟಡ ಎಂದು ಬಿಂಬಿಸಿ ಜಿಲ್ಲೆಯಲ್ಲಿ ಮತ್ತೆ ಸಂಘರ್ಷಕ್ಕೆ ಹವಣಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮಸೀದಿಯ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಮಾಡದಂತೆ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಲ್ಪಸಂಖ್ಯಾತ ಆಯೋಗದ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ನ ಕಾರ್ಯದಶಿರ್ ಎಂ. ಪಿ.ಮೊಯಿದಿನಬ್ಬ ಆಗ್ರಹಿಸಿದ್ದಾರೆ.

ಈ ವಿಚಾರದಲ್ಲಿ ಇಂದು ಅವರು ರಾಜ್ಯ ಅಲ್ಪಸಂಖ್ಯಾತ ಇಲಾಖಾ ಕಾರ್ಯ ದರ್ಶಿ ಹಾಗೂ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿರವರಿಗೆ ಮನವಿ ಯೊಂದನ್ನು ರವಾನಿಸಿದ್ದಾರೆ. ಗಜೆಟ್ ನೋಟಿಫಿಕೇಶನ್ಗೊಂಡು ವಕ್ಫ್ ಆಸ್ತಿ ಯಾಗಿರುವ 67ಸೆನ್ಸ್ ಜಮೀನನ್ನು ಸಂರಕ್ಷಿಸುವುದು ಮತ್ತು ಮಸೀದಿಗೆ ನಮಾಝ್ ನಿರ್ವಹಿಸಲು ಬರುವವರಿಗೆ ಅಡಚಣೆ ಮಾಡದಂತೆ ಕ್ರಮ ಕೈಗೊಳ್ಳುವ ಜವಾಬ್ದಾರಿ ಈ ಇಲಾಖೆಯದ್ದಾಗಿದ್ದು ಕೂಡಲೇ ಕ್ರಮಕೈಗೊಳ್ಳ ಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News