ಮಂಗಳೂರು: ಸೆ.144 ಜಾರಿಗೊಳಿಸಿ ಕಮಿಷನರ್ ಆದೇಶ

Update: 2021-04-21 14:30 GMT

ಮಂಗಳೂರು, ಎ.21: ಕೊರೋನ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರಕಾರ ಹೊರಡಿಸಿದ ಆದೇಶಕ್ಕೆ ಪೂರಕವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಸೆ.144 ಜಾರಿಗೊಳಿಸಿ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಎ.21ರಿಂದ ರಾತ್ರಿ 9ರಿಂದ ಮೇ 4ರವರೆಗೆ ಅಂದರೆ ಎರಡು ವಾರಗಳ ಕಾಲ ಪ್ರತಿ ದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ರಾತ್ರಿ ನಿಷೇಧಾಜ್ಞೆಯನ್ನು ಹಾಗೂ ಪ್ರತಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6ರವರೆಗೆ ವಾರಂತ್ಯದ ಸಂಪೂರ್ಣ ನಿಷೇಧಾಜ್ಞೆ ಹೇರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News