ಎಪ್ರಿಲ್ 24-30: ಭಾರತ-ಇಂಗ್ಲೆಂಡ್ ನಡುವಿನ ವಿಮಾನ ಸಂಚಾರ ರದ್ದುಗೊಳಿಸಿದ ಏರ್ ಇಂಡಿಯಾ

Update: 2021-04-21 15:55 GMT
ಸಾಂದರ್ಭಿಕ ಚಿತ್ರ 

ಮುಂಬೈ, ಎ. 19: ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಭಾರತ-ಇಂಗ್ಲೆಂಡ್ ನಡುವಿನ ಎಲ್ಲಾ ವಿಮಾನಗಳ ಸಂಚಾರವನ್ನು ಎಪ್ರಿಲ್ 24ರಿಂದ 30ರ ವರೆಗೆ ರದ್ದುಗೊಳಿಸಿದೆ.

ಬ್ರಿಟನ್‌ಗೆ ಪ್ರಯಾಣ ನಿಷೇಧಿಸಿದ ರಾಷ್ಟ್ರಗಳ ‘ಕೆಂಪು ಪಟ್ಟಿ’ಯಲ್ಲಿ ಭಾರತವನ್ನು ಸೇರಿಸಿದ ಕೆಲವು ದಿನಗಳ ಬಳಿಕ ಭಾರತ ಈ ನಿರ್ಧಾರ ತೆಗೆದುಕೊಂಡಿದೆ. ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ, ಬ್ರಿಟನ್ ಇತ್ತೀಚೆಗೆ ಪ್ರಕಟಿಸಿದ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ವಿಮಾನಗಳ ಸಂಚಾರವನ್ನು ಎಪ್ರಿಲ್ 24ರಿಂದ 30ರ ವರೆಗೆ ರದ್ದುಗೊಳಿಸಲಾಗಿದೆ. ಇದನ್ನು ಭಾರತ ಹಾಗೂ ಬ್ರಿಟನ್ ನಡುವೆ ಸಂಚರಿಸುವ ಪ್ರಯಾಣಿಕರು ಗಮನಿಸಬೇಕು ಎಂದು ತಿಳಿಸಿದೆ.

ಹೊಸ ವೇಳಾಪಟ್ಟಿ, ಮರು ಪಾವತಿ ಹಾಗೂ ಮನ್ನಾದ ಬಗ್ಗೆ ಅನಂತರ ಮಾಹಿತಿ ನೀಡಲಾಗುವುದು ಎಂದು ಕೂಡ ಏರ್ ಇಂಡಿಯಾ ತಿಳಿಸಿದೆ. ‘‘ಎಪ್ರಿಲ್ 24ರಿಂದ ಎಪ್ರಿಲ್ 30ರ ನಡುವೆ ದಿಲ್ಲಿ ಹಾಗೂ ಮುಂಬೈಯಿಂದ ಬ್ರಿಟನ್‌ಗೆ ವಾರದಲ್ಲೊಮ್ಮೆ ವಿಮಾನ ಸಂಚಾರ ನಿಗದಿಪಡಿಸುವ ಪ್ರಕ್ರಿಯಲ್ಲಿದ್ದೇವೆ’’ ಎಂದು ಏರ್ ಇಂಡಿಯಾ ಹೇಳಿದೆ.

ಇದಕ್ಕೆ ಸಂಬಂದಿಸಿದ ಮಾಹಿತಿಯನ್ನು ಏರ್ ಇಂಡಿಯಾದ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲ ತಾಣದ ಚಾನೆಲ್‌ನಲ್ಲಿ ಕೂಡ ಅಪ್‌ಲೋಡ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News