ಮನಪಾ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ: ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಪೊಲೀಸ್ ಆಯುಕ್ತರ ಆದೇಶ

Update: 2021-04-21 16:50 GMT

ಮಂಗಳೂರು, ಎ.21: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪುಮಹಾಕಾಳಿಪಡ್ಪುರೈಲ್ವೆ ಕೆಳಸೇತುವೆ ಮೂಲಕ ಮೋರ್ಗನ್ಸ್ ಗೇಟ್ ಜಂಕ್ಷನ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಎ.21ರಿಂದ ಜೂ.19ರವರೆಗೆ ನಿಷೇಧಿಸಿ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಿ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶಿಸಿದ್ದಾರೆ.

ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ: ರಾ.ಹೆ. 66ರ ಮಹಾಕಾಳಿಪಡ್ಪುಜಂಕ್ಷನ್‌ನಿಂದ ಮೋರ್ಗನ್ಸ್ ಗೇಟ್ ಜಂಕ್ಷನ್‌ವರೆಗೆ, ಘನ ಸರಕು ವಾಹನ ಮತ್ತು ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ. ಘನ ವಾಹನಗಳು ರಾ.ಹೆ.66ರಲ್ಲಿ ಮುಂದುವರಿದು ಪಂಪ್‌ವೆಲ್-ಕಂಕನಾಡಿ-ವೆಲೆನ್ಸಿಯಾ-ಕೋಟಿಚೆನ್ನಯ ವೃತ್ತ-ಕಾಸಿಯಾ ಜಂಕ್ಷನ್-ಜಪ್ಪುಭಗಿನಿ ಸಮಾಜ ರಸ್ತೆ ಮಾರ್ಗವಾಗಿ ಮುಂದುವರಿದು ಬೋಳಾರ ರಸ್ತೆ ಮೂಲಕ ಸಂಚರಿಸುವುದು.

ಮಿಷನ್ ಸ್ಟ್ರೀಟ್ ರಸ್ತೆ ಹಾಗೂ ಎಂ.ಪಿ.ಟಿ. ರಸ್ತೆ ಕಾಮಗಾರಿ: ಎ.21ರಿಂದ ಮೇ 20ರವರೆಗೆ ಮಿುಷನ್ ಸ್ಟ್ರೀಟ್ ರಸ್ತೆ ಹಾಗೂ ಎಂ.ಪಿ.ಟಿ. ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಸ್ಟೇಟ್‌ಬ್ಯಾಂಕ್‌ನಿಂದ ಮಿಷನ್ ಸ್ಟ್ರೀಟ್ ರಸ್ತೆ ಮೂಲಕ ಬಂದರು, ಕುದ್ರೋಳಿ, ಸುಲ್ತಾನ್ ಬತ್ತೇರಿ ಕಡೆಗೆ ಸಂಚರಿಸುವ ರೂಟ್ ಬಸ್ಸುಗಳು ಹಾಗೂ ಇತರ ಎಲ್ಲಾ ವಾಹನಗಳು ನೆಲ್ಲಿಕಾಯಿ ರಸ್ತೆ - ಬದ್ರಿಯಾ ಜಂಕ್ಷನ್ - ಬಂದರ್ ಜಂಕ್ಷನ್ ರಸ್ತೆ ಮೂಲಕ ಕುದ್ರೋಳಿ -ಸುಲ್ತಾನ್ ಬತ್ತೇರಿ ಕಡೆಗೆ ಸಂಚರಿಸುವುದು. ಕುದ್ರೋಳಿ - ಸುಲ್ತಾನ್ ಬತ್ತೇರಿ ಕಡೆುಂದ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸುವ ರೂಟ್ ಬಸ್ಸುಗಳು ಹಾಗೂ ಇತರ ಎಲ್ಲಾ ವಾಹನಗಳು ಬಂದರ್ ಜಂಕ್ಷನ್ - ಬದ್ರಿಯಾ ಜಂಕ್ಷನ್ - ಸ್ಟೇಟ್‌ಬ್ಯಾಂಕ್ ಮೂಲಕ ಸಿಟಿ ಬಸ್ ನಿಲ್ದಾಣ ಕಡೆಗೆ ಸಂಚರಿಸುವುದು. ಬಂದರ್ ಜಂಕ್ಷನ್‌ನಿಂದ ಬದ್ರಿಯಾ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಕಾಮಗಾರಿ ಮುಗಿಯುವವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಎಂ.ಪಿ.ಟಿ. ರಸ್ತೆಯಿಂದ ಬೀಬಿ ಅಲಾಬಿ ರಸ್ತೆಯಿಂದ ಹಾಗೂ ಅಝೀಝುದ್ದೀನ್ ರಸ್ತೆಯಿಂದ ಮಿಷನ್ ಸ್ಟ್ರೀಟ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕೆನರಾ ಗೂಡ್ಸ್ ಅಡ್ಡ ರಸ್ತೆಯ ಮೂಲಕ ಬಂದರ್ ಜಂಕ್ಷನ್ - ಬದ್ರಿಯಾ ಜಂಕ್ಷನ್ ಮೂಲಕ ಸಂಚರಿಸುವುದು.

ಜೆ.ಎಂ 4ನೇ ಅಡ್ಡ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ: ಎ.21ರಿಂದ ಮೇ20ರವರೆಗೆ ಜೆ.ಎಂ 4ನೇ ಅಡ್ಡ ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕಾಮಗಾರಿ ನಡೆಸುವ ವೇಳೆ ಜೆ.ಎಂ 4ನೇ ಅಡ್ಡರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಾಹನಗಳು ಜುಮ್ಮಾ ಮಸೀದಿ 3ನೇ ಅಡ್ಡ ರಸ್ತೆ , ಜುಮ್ಮಾ ಮಸೀದಿ 5ನೇ ಅಡ್ಡ ರಸ್ತೆ , ಜುಮ್ಮಾ ಮಸೀದಿ ರಸ್ತೆ ಹಾಗೂ ಅಝೀಝುದ್ದೀನ್ ಕ್ರಾಸ್ ರಸ್ತೆಗಳ ಮೂಲಕ ಸಂಚರಿಸುವುದು.

ಈ ವಾಹನ ಸಂಚಾರ ನಿಷೇಧವು ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News