ಎ.23-24: ನೀರು ಸರಬರಾಜಿನಲ್ಲಿ ವ್ಯತ್ಯಯ

Update: 2021-04-21 16:53 GMT

ಮಂಗಳೂರು, ಎ.21: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್ 1-18 ಎಮ್‌ಜಿಡಿ ರೇಚಕ ಸ್ಥಾವರದಿಂದ ಹಿಲ್‌ಲ್ಟೋಪ್ ಟ್ಯಾಂಕ್‌ಗೆ ಪಂಪಿಂಗ್ ಮಾಡುವ ಮುಖ್ಯ ಕೊಳವೆಯ ಮಲ್ಟಿ ಶೆಟರ್ ಹಾಗೂ ಮಲ್ಟಿ ಅವರ್ಸ್ ಎನ್‌ಆರ್‌ಗಳು ಹಾಳಾಗಿದ್ದು, ಬದಲಿಗೆ ಹೊಸ ’0’ ವೆಲೊಸಿಟಿ ವಾಲ್ಸ್ ಗಳನ್ನು ಅಳವಡಿಸುವ ಕಾಮಗಾರಿ ನಡೆಯಲಿದೆ.

ಹಾಗಾಗಿ ಎ.23 ರಂದು ಬೆಳಗ್ಗೆ 6 ಗಂಟೆಯಿಂದ 24ರ ಬೆಳಿಗ್ಗೆ 6 ಗಂಟೆಯವರೆಗೆ ಸುರತ್ಕಲ್, ಕಾಟಿಪಳ್ಳ, ಎನ್‌ಐಟಿಕೆ, ಎಂಸಿಎಫ್, ಕೂಳೂರು, ಕಾವೂರು, ಕೋಡಿಕಲ್, ಪಿವಿಎಸ್, ಲೇಡಿಹಿಲ್, ಬಂದರ್ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತರರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News