ಸಿಆರ್ ಪಿಎಫ್ ಯೋಧರಿಂದ ಕಾರ್ಯಕರ್ತನ ಕಾಲಿಗೆ ಗುಂಡು: ಟಿಎಂಸಿ ಆರೋಪ

Update: 2021-04-22 09:58 GMT

ಕೋಲ್ಕತಾ:  ಬಂಗಾಳ ವಿಧಾನಸಭೆಗೆ ಗುರುವಾರ ನಡೆಯುತ್ತಿರುವ ಆರನೇ ಹಂತದ ಮತದಾನದ ವೇಳೆ ಸಿಆರ್ ಪಿಎಫ್  ಯೋಧರೊಬ್ಬರು ಪಕ್ಷದ ಕಾರ್ಯಕರ್ತನ ಕಾಲಿಗೆ ಗುಂಡುಹಾರಿಸಿದ್ದಾರೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಗುರುವಾರ ಮತದಾನ ನಡೆಯುತ್ತಿದ್ದಾಗ ಉತ್ತರ 24 ಪರಗಣ ಜಿಲ್ಲೆಯ ಅಶೋಕ ನಗರ ವಿಧಾನಸಭಾ ಕ್ಷೇತ್ರದ ಕಬಿರುಲ್ ನಲ್ಲಿ ಟಿಎಂಸಿ ಕಾರ್ಯಕರ್ತನಿಗೆ ಸಿಆರ್ ಪಿಎಫ್ ಯೋಧರೊಬ್ಬರು ಗುಂಡು ಹಾರಿಸಿದ್ದಾರೆ. ಅಶೋಕನಗರದ ದಿಘ್ರಾ ಮಲಿಕ್ ಬೆರಿಯಾ ಪ್ರದೇಶದ ಮತಗಟ್ಟೆ 79ರಲ್ಲಿ ಈ ಘಟನೆ ನಡೆದಿದೆ.

ಮತ್ತೊಂದು ಘಟನೆಯಲ್ಲಿ ಉತ್ತರ ದಿನಾಜ್ ಪುರದ ಚೋಪ್ರಾ ಪ್ರದೇಶದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಗುಂಡು ಹಾರಾಟ ನಡೆಸಲಾಗಿತ್ತು ಎಂದು ವರದಿಯಾಗಿದೆ.

ಸಿಇಒ ಕಚೇರಿಯು ಘಟನೆಯ ಕುರಿತು ಸ್ಥಳೀಯಾಡಳಿತದಿಂದ ವರದಿ ನಿರೀಕ್ಷಿಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಬಂಗಾಳದಲ್ಲಿ ಗುರುವಾರ ಆರನೇ ಹಂತದ ಮತದಾನವು 43 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ 57.30 ಶೇ.ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News