ʼಉಗ್ರವಾದಿʼ ಹಣೆಪಟ್ಟಿ ಕಟ್ಟುತ್ತಾರೆಂದು ರಮಝಾನ್‌ ಉಪವಾಸ ಆಚರಿಸಲು ಸಿದ್ಧರಿಲ್ಲದ ಉಯ್ಗುರ್ ಮುಸ್ಲಿಮರು

Update: 2021-04-22 11:51 GMT
Photo: Twitter

ಬೀಜಿಂಗ್: ಕಳೆದ ಮುರು ವರ್ಷಗಳಿಂದ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದ ಉಯ್ಗುರ್ ಮುಸ್ಲಿಮರಿಗೆ ಪವಿತ್ರ ರಮ್ಜಾನ್ ತಿಂಗಳಲ್ಲಿ ಉಪವಾಸ ನಡೆಸುವುದಕ್ಕೆ ನಿಷೇಧ ಹೇರಲಾಗಿತ್ತಾದರೆ ಈ ವರ್ಷ ನಿರ್ಬಂಧಗಳ ಸಡಿಲಿಕೆಯ ಹೊರತಾಗಿಯೂ  ಉಯ್ಗುರ್ ಮುಸ್ಲಿಮರು ರಮ್ಜಾನ್ ಉಪವಾಸ ಆಚರಿಸದೇ ಇರಲು ನಿರ್ಧರಿಸಿದ್ದಾರೆ. ಎಲ್ಲಿ ತಮಗೆ ಉಗ್ರವಾದಿಯೆಂಬ ಹಣೆಪಟ್ಟಿ ಕಟ್ಟಿ ದಿಗ್ಬಂಧನ ಕೇಂದ್ರಗಳಲ್ಲಿ ತಮ್ಮನ್ನಿರಿಸುತ್ತಾರೋ ಎಂಬ ಭಯದಿಂದ ಅವರು  ಉಪವಾಸ ಆಚರಿಸುತ್ತಿಲ್ಲ.

ಬೇಕಿದ್ದವರು ಉಪವಾಸ ಆಚರಿಸಬಹುದೆಂಬ ಸಂದೇಶವಿದೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ ಭಯದಿಂದ ಯಾರೂ ಉಪವಾಸ ಆಚರಿಸುತ್ತಿಲ್ಲ. ಇಲ್ಲಿಯ ತನಕ ಈ ಪ್ರಾಂತ್ಯದಲ್ಲಿ ರಮಝಾನ್ ಉಪವಾಸ ಆಚರಿಸಿದ ಒಬ್ಬನೇ ಒಬ್ಬ  ಉಯ್ಗುರ್ ಮುಸ್ಲಿಮರನ್ನು ನೋಡಿಲ್ಲ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಕೆಲ ಅಧಿಕಾರಿಗಳು ತಿಳಿಸುತ್ತಾರೆ.

ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿರುವ ದಿಗ್ಬಂಧನ ಕೇಂದ್ರಗಳಲ್ಲಿ ಸಾವಿರಾರು ಉಯ್ಗುರ್ ಮುಸ್ಲಿಮರನ್ನು ಇರಿಸಿ ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜಾಗತಿಕವಾಗಿ ಒತ್ತಡದಲ್ಲಿರುವ ಚೀನಾದ ಆಡಳಿತ ತಾತ್ಕಾಲಿಕವಾಗಿ ಕೆಲವೊಂದು ನಿರ್ಬಂಧಗಳನ್ನು ಸಡಿಲಿಸಿ ಟೀಕೆಗಳನ್ನು ತಪ್ಪಿಸಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News