ಸರಕಾರದ ಆದೇಶ ಪಾಲಿಸಲು ರಾಜ್ಯ ವಕ್ಫ್ ಮಂಡಳಿ ಸೂಚನೆ

Update: 2021-04-22 14:36 GMT

ಮಂಗಳೂರು, ಎ.22: ಕೋವಿಡ್ -19ರ 2ನೆ ಅಲೆ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದ್ದಾರೆ.

ಮೇ 4ರವರೆಗೆ ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಇರುತ್ತದೆ. ಅದಲ್ಲದೆ ವೀಕೆಂಡ್ ಕರ್ಫ್ಯೂ (ಎ.23ರ ರಾತ್ರಿ 9ರಿಂದ ಎ.26ರ ಮುಂಜಾನೆ 6 ಗಂಟೆಯವರೆಗೆ) ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮದ್ರಸಗಳು ಮುಚ್ಚಲ್ಪಟ್ಟಿರುತ್ತದೆ. ಆನ್‌ಲೈನ್/ದೂರಶಿಕ್ಷಣ ನಡೆಸಬಹುದಾಗಿದೆ. ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಬೃಹತ್ ಪ್ರಮಾಣದ ಸಮಾವೇಶ ನಿಷೇದಿಸಲಾಗಿದೆ. ಮಸೀದಿಗಳು, ದರ್ಗಾಗಳು, ಅಷೂರಖಾನಗಳಲ್ಲಿ ಸಾರ್ವಜನಿಕ ಪ್ರವೇಶವಿರುವುದಿಲ್ಲ. ಆದರೆ ಮಸೀದಿಯಲ್ಲಿ ಕಾರ್ಯನಿರ್ವಹಿಸುವ ಪೇಶ್ ಇಮಾಮ್/ಮೌಝಿನ್ ಮತ್ತಿತರ ದೈನಂದಿನ ಚಟುವಟಿಕೆಯಲ್ಲಿ ತೊಡಗಿರುವ ಸಿಬ್ಬಂದಿ ವರ್ಗವು ತಮ್ಮ ಕೆಲಸವನ್ನು ಮಾಡಬಹುದಾಗಿದೆ.

ಮದುವೆ ಕಾರ್ಯಕ್ರಮದಲ್ಲಿ ಗರಿಷ್ಠ 50 ಮಂದಿಗೆ ಮತ್ತು ದಫನ ಕ್ರಿಯೆಯಲ್ಲಿ ಗರಿಷ್ಠ 20ಮಂದಿಗೆ ಭಾಗವಹಿಸಬಹುದಾಗಿದೆ. ಈ ಸಂದರ್ಭ ಕೋವಿಡ್-19ರ ಶಿಷ್ಟಾಚಾರ ಪಾಲಿಸಬೇಕಿದೆ ಎಂದು ಸಿಇಒ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News