ದ.ಕ. ಜಿಲ್ಲೆಯಲ್ಲಿ 474 ಮಂದಿಯಲ್ಲಿ ಕೋರೋನ ಸೋಂಕು

Update: 2021-04-22 15:26 GMT

ಮಂಗಳೂರು, ಎ.22: ದ.ಕ.ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣವು ಏರುಗತಿಯಲ್ಲಿ ಸಾಗುತ್ತಿದ್ದು, ಗುರುವಾರ ಜಿಲ್ಲೆ ಯಲ್ಲಿ 474 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮಧ್ಯೆ 121 ಮಂದಿ ಚಿಕಿತ್ಸೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ಗುರುವಾರದವರೆಗೆ ಜಿಲ್ಲೆಯಲ್ಲಿ 2,825 ಸಕ್ರಿಯ ಪ್ರಕರಣಗಳಿವೆ.

ಕಂಟೈನ್ಮೆಂಟ್ ವಲಯ ಘೋಷಣೆ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಎರಡು ಕಂಟೈನ್ಮೆಂಟ್ ವಲಯ ಘೋಷಣೆಯಾಗಿದೆ. ನಗರದ ಕದ್ರಿಯಲ್ಲಿರುವ ನರ್ಸಿಂಗ್ ಕಾಲೇಜಿನ 5 ವಿದ್ಯಾರ್ಥಿಗಳಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು, ಹಾಗಾಗಿ ಆ ಕಾಲೇಜನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಅದಲ್ಲದೆ ನಗರದ ಕೊಡಿಯಾಲ್‌ಗುತ್ತಿನ ನರ್ಸಿಂಗ್ ಆಸ್ಪತ್ರೆಯ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ 5 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು, ಅದನ್ನೂ ಕಂಟೈನ್ಮೆಂಟ್ ವಲಯವನ್ನಾಗಿ ಮಾಡಲಾಗಿದೆ.

ಲಸಿಕೆ: ಜಿಲ್ಲೆಯಲ್ಲಿ 6,613 ಮಂದಿ ಕೋವಿಡ್ ಲಸಿಕೆಯನ್ನು ಗುರುವಾರ ಸ್ವೀಕರಿಸಿದ್ದಾರೆ.

ಸ್ನಾತಕೋತ್ತರ ಪರೀಕ್ಷೆ ಮುಂದಕ್ಕೆ: ಕೊವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ಗಮನಿಸಿ ರಾಜ್ಯ ಸರಕಾರ ಎ.21ರಿಂದ ಮೇ 4ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಎ.26ರಿಂದ ನಡೆಯ ಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಿದೆ. ಈ ಅವಧಿಯಲ್ಲಿ ಭೌತಿಕ ತರಗತಿಗಳಿಗೂ ರಜೆ ಘೋಷಿಸಲಾಗಿದೆ. ಆದರೆ ಆನ್‌ಲೈನ್ ತರಗತಿಗಳನ್ನು ನಡೆಸಬಹುದಾಗಿದೆ ಎಂದು ಮಂಗಳೂರು ವಿವಿಯ ಕುಲಸಚಿವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News