×
Ad

ದ.ಕ.ಜಿಲ್ಲೆಯ ಹಲವು ಕಡೆ ಸಾಧಾರಣ ಮಳೆ

Update: 2021-04-22 20:34 IST

ಮಂಗಳೂರು, ಎ.22: ದ.ಕ.ಜಿಲ್ಲೆಯ ಮಂಗಳೂರು, ಉಪ್ಪಿನಂಗಡಿ, ಬಂಟ್ವಾಳ, ಧರ್ಮಸ್ಥಳ, ಸುಳ್ಯ ಮತ್ತಿತರ ಕಡೆಗಳಲ್ಲಿ ಗುರುವಾರ ಸಂಜೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ.

ಪುತ್ತೂರು, ವಿಟ್ಲ, ಮಂಗಳೂರು, ಮೂಡುಬಿದಿರೆ, ಸುರತ್ಕಲ್ ಸಹಿತ ಹಲವು ಕಡೆ ಸಿಡಿಲಿನ ಅರ್ಭಟ ಬಿರುಸು ಪಡೆದಿತ್ತು. ಗುರುವಾರ ಮುಂಜಾನೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಸೆಖೆ ಕಂಡು ಬಂದಿತ್ತು.ಸಂಜೆಯಾಗುತ್ತಲೇ ಮಳೆ ಸುರಿದಿದೆ.

ಕರಾವಳಿಯಲ್ಲಿ ಇನ್ನೂ ಒಂದು ವಾರದ ಕಾಲ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ. ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯ ಬರುವ ಸಾಧ್ಯತೆಯನ್ನು ಇಲಾಖೆ ದೃಢಪಡಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News