ಮೂಳೆ ಮುರಿತಗೊಂಡಿದ್ದ ವ್ಯಕ್ತಿಗೆ ಫಾದರ್ ಮುಲ್ಲರ್ ವೈದ್ಯರ ತಂಡದಿಂದ ಚಿಕಿತ್ಸೆ

Update: 2021-04-22 17:03 GMT

ಮಂಗಳೂರು : ಕಳೆದ ಫೆ.19 ರಂದು ಕುಂದಾಪುರ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಂಟ್ವಾಳ ಮೂಲದ ಅವಲಪಡೂರಿನ 40 ವರ್ಷ ವಯಸ್ಸಿನ ಅಬ್ದುಲ್ ಅಝೀಝ್ ಅವರ ಬಲಪಾದ ಹಿಂಭಾಗ ಮತ್ತು ಸೊಂಟದ ಮೂಳೆ ಗಂಭೀರ ವಾಗಿ ಮೂಳೆ ಮುರಿತಗೊಂಡು ಹಾನಿಗೀಡಾಗಿತ್ತು. ಇದೀಗ ಫಾದರ್ ಮುಲ್ಲರ್ ವೈದ್ಯ ರ ತಂಡ ಈ ಸಂಕೀರ್ಣ ಪ್ರಕರದಲ್ಲಿ  ಯಶಸ್ವಿ ಚಿಕಿತ್ಸೆಯ ಮೂಲಕ ಗಾಯಾಳು ಚೇತರಿಸಿಕೊಳ್ಳವಂತೆ ಮಾಡಿದ್ದಾರೆ.

ಗಾಯಾಳುವನ್ನು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರತಂದ ಸಂದರ್ಭದಲ್ಲಿ ಅಪಘಾತದಲ್ಲಿ ಆ ವ್ಯಕ್ತಿ ಬಲ ಪಾದದ ಹಿಂಭಾಗ ಮತ್ತು ಸೊಂಟದ ಮೂಳೆಗೆ ತೀವ್ರವಾದ ಹಾನಿಯಾಗಿತ್ತು. ಹಲವು ಮೂಳೆ ಮುರಿತ ಮತ್ತು ನಜ್ಜು ಗುಜ್ಜಾಗಿದ್ದ ಕಾಲಿನ ‌ಪಾದದ ಭಾಗವನ್ನು ಡಾ.ಅರವಿಂದ್ ರಾವ್ ನೇತೃತ್ವದ ಫಾದರ್ ಮುಲ್ಲರ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ತಂಡವು ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಪಡಿಸಲು ಕಾರಣವಾಗಿದೆ. ಶಸ್ತ್ರಚಿಕಿತ್ಸೆಗಳ ನಂತರ ರೋಗಿಯು ಚೆನ್ನಾಗಿ ಚೇತರಿಸಿ ಕೊಂಡು, ಪಿಸಿಯೋಥೆರಫಿಯ  ಬಳಿಕ ಇನ್ನಷ್ಟು ಸುಧಾರಿಸಿಕೊಂಡು ಆಸ್ಪತ್ರೆ ಯಿಂದ ಬಿಡುಗಡೆ ಗೊಂಡಿದ್ದಾರೆ. ಈ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಫಾದರ್ ಮುಲ್ಲರ್ ಆಸ್ಪತ್ರೆ ಯ ತಂಡ ಸಮರ್ಥ ವಾಗಿ ನಿರ್ವಹಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News