ಅಮೆರಿಕ: ಇನ್ನೋರ್ವ ಕರಿಯ ವ್ಯಕ್ತಿಯನ್ನು ಕೊಂದ ಪೊಲೀಸರು

Update: 2021-04-22 18:20 GMT

ವಾಶಿಂಗ್ಟನ್, ಎ. 22: ಅಮೆರಿಕದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗುತ್ತಿರುವ ಆಫ್ರಿಕನ್ ಅಮೆರಿಕನ್ನರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ನಾರ್ತ್ ಕ್ಯಾರಲೈನ್ ರಾಜ್ಯದಲ್ಲಿ ಬುಧವಾರ ತನಿಖೆಯ ವೇಳೆ ಪೊಲೀಸರು 10 ಮಕ್ಕಳ ತಂದೆಯಾಗಿರುವ ಕರಿಯ ವ್ಯಕ್ತಿಯೋರ್ವರನ್ನು ಗುಂಡು ಹಾರಿಸಿ ಕೊಂದಿದ್ದಾರೆ.

ಎಲಿಝಬೆತ್ ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಆ್ಯಂಡ್ರೂ ಬ್ರೌನ್ ಮೇಲೆ ಗುಂಡು ಹಾರಿಸಿದಾಗ ಅವರು ಮೃತಪಟ್ಟರು ಎಂದು ಪ್ಯಾಸ್ಕೋಟಂಕ್ ಕೌಂಟಿ ಶೆರಿಫ್ ಟಾಮಿ ವೂಟನ್ ಹೇಳಿದರು. ಬ್ರೌನ್ ವಿರುದ್ಧ ವಾರಂಟೊಂದನ್ನು ಜಾರಿಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತನ್ನ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಅವರ ಮೇಲೆ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಸ್ಥಳೀಯ ಟಿವಿ ಚಾನೆಲೊಂದು ವರದಿ ಮಾಡಿದೆ.

40 ವರ್ಷದ ಬ್ರೌನ್ 10 ಮಕ್ಕಳ ತಂದೆಯಾಗಿದ್ದರು.

ಕಳೆದ ವರ್ಷ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ರನ್ನು ಉಸಿರುಗಟ್ಟಿಸಿ ಕೊಂದ ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ದೋಷಿ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದ ಮರುದಿನವೇ ಈ ಹತ್ಯೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News