×
Ad

ಅಮಿತ್ ಪಾಂಘಾಲ್ ಸೆಮಿ ಫೈನಲ್‌ಗೆ ಲಗ್ಗೆ

Update: 2021-04-23 09:44 IST

ಹೊಸದಿಲ್ಲಿ: ರಶ್ಯದ ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಗವರ್ನರ್ಸ್‌ ಕಪ್‌ನಲ್ಲಿ ಸೆಮಿ ಫೈನಲ್ ತಲುಪಿರುವ ಭಾರತದ ಬಾಕ್ಸರ್ ಅಮಿತ್ ಪಾಂಘಾಲ್(52 ಕೆಜಿ)ಕನಿಷ್ಠ ಕಂಚಿನ ಪದಕವನ್ನು ದೃಢಪಡಿಸಿದ್ದಾರೆ. ಕಣದಲ್ಲಿದ್ದ ಭಾರತದ ಇತರ ಐವರು ಬಾಕ್ಸರ್ ಗಳು ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರು.

ಹರ್ಯಾಣದ ಬಾಕ್ಸರ್ ಅಮಿತ್ ಅಂತಿಮ-4ರ ಸುತ್ತಿನ ಸ್ಪರ್ಧೆಯಲ್ಲಿ ಸ್ಥಳೀಯ ಫೇವರಿಟ್ ತಮಿರ್ ಗಲಾನೊವ್ ಅವರನ್ನು 5-0 ಅಂತರದಿಂದ ಮಣಿಸಿದರು.

ಇದೇ ವೇಳೆ, ಸುಮಿತ್ ಸಾಂಗ್ವಾನ್(81ಕೆಜಿ), ಮುಹಮ್ಮದ್ ಹಸಮುದ್ದೀನ್(57ಕೆಜಿ), ನಮನ್ ತನ್ವರ್(91ಕೆಜಿ), ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಆಶೀಷ್ ಕುಮಾರ್(75ಕೆಜಿ) ಹಾಗೂ ವಿನೋದ್ ತನ್ವರ್(49ಕೆಜಿ)ಬೇಗನೆ ಸೋತು ನಿರ್ಗಮಿಸಿದ್ದಾರೆ.

ವಿನೋದ್ ರಶ್ಯದ ಇಗೊರ್(49ಕೆಜಿ)ವಿರುದ್ಧ 2-3 ಅಂತರದಿಂದ, ಸುಮಿತ್ ಉಜ್ಬೇಕಿಸ್ತಾನದ ದಿಶೊದ್ ರರ್ಮೊಟೊವ್(81ಕೆಜಿ), ನಮನ್ ಅವರು ಖಝಕಿಸ್ತಾನದ ಆಯ್ಬೆಕ್ ಒರಾಲ್ಬೆ(91ಕೆಜಿ), ಆಶೀಷ್ ಅವರು ರಶ್ಯದ ನಿಕಿತಾ ಕುಝ್ಮಿನ್(75ಕೆಜಿ) ವಿರುದ್ಧ 2-3 ಅಂತರದಿಂದ ಸೋತಿದ್ದಾರೆ.

ಮುಹಮ್ಮದ್ ಹಸಮುದ್ದೀನ್(57ಕೆಜಿ) ಉಜ್ಬೇಕಿಸ್ತಾನದ ಮಿರಾಝೀಝ್ ಮುರ್ಝಾಖಲಿಲೊವ್(57ಕೆಜಿ)ವಿರುದ್ಧ ಒಮ್ಮತದ ತೀರ್ಪಿನಲ್ಲಿ ಸೋಲುಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News